ಪಾಕಿಸ್ತಾನ್: ಭಾರತಕ್ಕೆ ಮೋಸ್ಟ್ ವಾಟೆಂಡ್ ಆಗಿದ್ದ ಉಗ್ರ, ಲಷ್ಕರ್ (lashkar e- taiba) ಮುಖ್ಯಸ್ಥ ಹಫೀಜ್ ಆಪ್ತ ಅದ್ನಾನ್ ಅಹಮದ್ ಅಲಿಯಾಸ್ ಹಂಜಾಲಾ ಅದ್ನಾನ್‌ನನ್ನು (Hanjala adnan) ಪಾಕಿಸ್ತಾನ್ ಕರಾಚಿಯಲ್ಲಿ ಅಪರಿಚಿತರಯ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
2015ರಲ್ಲಿ ಉಧಮ್‌ಪುರ ,ಮತ್ತು 2016ರಲ್ಲಿ ಪಾಂಪೋರ್‌ನಲ್ಲಿ ಸಿಆರ್‌ಪಿಎಎಫ್ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಹಂಜಾಲ್ ಅದ್ನಾನ್‌ನನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ.
ಡಿಸೆಂಬರ್ 3ರಂದು ಹಂಜಾಲಾ ಅದ್ನಾನ್ ಮೇಲೆ ದುಷ್ಕರ್ಮಿಗಳು ಗುಂಡಿನ ಮಳೆಗರೆದಿದ್ದು, ಹಂಜಾಲಾಗೆ ನಾಲ್ಕು ಗುಂಡು ತಗುಲಿತ್ತು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಈತ ಲಷ್ಕರ್ ಎ ತೊಯ್ಬಾದ ಟಾಪ್ ಕಮಾಂಡರ್ ಆಗಿದ್ದ ಎಂದು ಹೇಳಲಾಗಿದೆ.
ಪಾಕ್‌ನಲ್ಲಿ ಸರಣಿ ಉಗ್ರರ ಹತ್ಯೆ
ಪಾಕಿಸ್ತಾನದಲ್ಲಿ ಒಬ್ಬರ ಬಳಿ ಮತ್ತೊಬ್ಬರಂತೆ ಉಗ್ರರ ಹತ್ಯೆ ನಡೆಯುತ್ತಿದ್ದು ಎಲ್ಲಾ ಅಪರಿಚಿತರಿಂದ ಗುಂಡಿನ ದಾಳಿಗೆ ಬಲಿಯಾಗುತ್ತಿದ್ದಾರೆ. ಹಂಜಾಲಾ ಅದ್ನಾನ್‌ಗೂ ಮುನ್ನ ಪಠಾಣಾ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಶಾಹೀದ್ ಲತೀಫ್ ಹತ್ಯೆ, ದಾವೂದ್ ಮಲ್ಲಿಕ್ ಸೇರಿ ಹಲವು ಉಗ್ರರ ಕೊಲೆ ವರದಿಯಾಗಿದೆ. ಕಳೆದ 20 ತಿಂಗಳಲ್ಲಿ 19 ಉಗ್ರರ ಹತ್ಯೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.