Monday, December 9, 2024

ಜೈನ ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ..! ಹಂಸಲೇಖ ಕ್ಷಮೆಯಾಚನೆ

ಜೈನ ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆ ಕೇಳಿದ್ದಾರೆ. ಈ ಕುರಿತು ಲಿಖಿತ ಹಾಗೂ ವೀಡಿಯೋ ಮೂಲಕ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಗೌರಿ ಚಿತ್ರದ ಸಾಂಗ್‌ ಲಾಂಚ್‌ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಹಂಸಲೇಖ ಅವರು, ಜೈನರ ಫಿಲಾಸಫಿಯಲ್ಲಿ 24 ಜನ್ಮಗಳಿಗೆ ಅಂತಾರೆ, ಅದೆಲ್ಲ ಬುಲ್‌ಶಿಟ್‌ ಎಂಬ ಪದವನ್ನು ಬಳಕೆ ಮಾಡಿದ್ದರು. ಈ ಹೇಳಿಕೆಗೆ ಜೈನ ಸಮುದಾಯದ ಜನತೆ ಆಕ್ರೋಶಗೊಂಡಿದ್ದರು. ಇದರಿಂದ ಎಚ್ಚತ್ತ ಹಂಸಲೇಖ ಜೈನ ಸಮುದಾಯದ ಜನತೆ ಬಳಿಕ ತಮ್ಮ ಕ್ಷಮೆ ಕೇಳಿದ್ದಾರೆ.

ನನ್ನ ಪಂಪನಾಣೆ, ನನ್ನ ಪದ ಬಳಕೆ ಉದ್ದೇಶ ಪೂರಿತವಲ್ಲ. ಗಲಾಟೆ, ಒತ್ತಡದ ಆ ಕ್ಯಾಮೆರಾಗಳ ಗುಂಪಿನಲ್ಲಿ ಆ ಮಾತು ತೂರಿ ಬಂದಿದೆ. ತ್ಯಾಗ, ಸಹನೆಯ ಸಂಸ್ಕೃತಿಯನ್ನು ಜಗತ್ತಿಗೆ ನೀಡಿದ ಜೈನ ಸುಮುದಾಯಕ್ಕೆ ಶಿರವಾಗಿ ಕ್ಷಮೆ ಕೋರುತ್ತೇನೆ ಎಂದು ಹಂಸಲೇಖ ಹೇಳಿದ್ದಾರೆ.

ಪ್ರಿಯ ಮಾಧ್ಯಮಗಳೇ, ದಯಮಾಡಿ, ನಾನು ದುಡುಕಿ ಮಾತಾಡಿದ ಆ Bullshit ಪದವನ್ನು Delete ಮಾಡಿ. ಕನ್ನಡದ ಕಾವ್ಯಪರಂಪರೆಯ ಬೇರು ಕಾಂಡಗಳಾಗಿರುವ ಜೈನಕವಿ ಮುನಿ ಪರಂಪರೆಗೆ ಆಗಿರುವ ಗಾಯವನ್ನು ವಾಸಿ ಮಾಡಲು ಈ ಮೂಲಕ ಕೋರುತ್ತಿದ್ದೇನೆ. ಆಡು ಮಾತುಗಳನ್ನು COIN ಮಾಡುವ ನನ್ನಂತ ಸಿನಿಮಾ ರೈಟರ್‌ಗಳಿಗೆ ಇದು ಶಾಸ್ತಿ ಮತ್ತು ಶಾಪ ಎಂದು ನಾನು ಭಾವಿಸಿದ್ದೇನೆ. ಆ ಮಾತು ನನ್ನ ಬಾಯಿಂದ ಅಲ್ಲಿ ಹೊರಟ ಹಿನ್ನೆಲೆ ಹೀಗಿದೆ.

ಆ ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ಚಾನೆಲ್ ಅವರು Individual Biteಗಾಗಿ ಕೈ ಹಿಡಿದು ಎಳೆದಾಡಿದರು. ಆಗ ಸಿಟ್ಟು ತಡೆದುಕೊಂಡು ಹೊರ ಬಂದೆ. ನನ್ನ ಸಹಾಯಕ , ನನ್ನನ್ನ ಹೊಗಳಿದ. ಸಿಟ್ಟು ತಡೆಯಲಾಗಲಿಲ್ಲ ಆದರೂಈ ತಡೆದುಕೊಂಡಿದ್ದು ಒಳ್ಳೆದಾಯ್ತು ಸಾರ್ ಎಚಿದ. ಆಗ ನಾನು ಆತನಿಗೆ ಸಿಟ್ಟು ಹೋಗಿ ಬರೋ ಬುಲೆಟ್ಟು ಎಂದು ನಗಿಸಿದೆ. ನಾನು ಇನ್ನೂ ಮುಂದುವರೆದು, ಸಿಟ್ಟು ಒಂದು ಬುಲ್ಶಿಟ್ಟು ಎಂದೆ. ಆದರೆ ಆ ಪದ ಅಲ್ಲಿ ಬರಬಾರದಿತ್ತು. ಇಷ್ಟೆ ನಡೆದಿದ್ದು. ದಯವಿಷ್ಟು ಕ್ಷಮಿಸಿ ಎಂದು ಹಂಸಲೇಖ ಕೇಳಿಕೊಂಡಿದ್ದಾರೆ.

Related Articles

Latest Articles