Monday, September 16, 2024

ಪ್ಯಾರಿಸ್ ಒಲಿಂಪಿಕ್ ಗೆ ವರ್ಣರಂಜಿತ ತೆರೆ – ಮುಂದಿನ ಒಲಿಂಪಿಕ್ಸ್ ಎಲ್ಲಿ, ಯಾವಾಗ ನಡೆಯಲಿದೆ?

ಜುಲೈ 26 ರಿಂದ ಪ್ರಾರಂಭವಾದ 33ನೇ ಒಲಿಂಪಿಕ್ಸ್​ಗೆ ಭಾನುವಾರ ಫ್ರಾನ್ಸ್​ನ ರಾಜಧಾನಿ ಪ್ಯಾರಿಸ್​ನಲ್ಲಿ ತೆರೆಬಿದ್ದಿದೆ. ಪ್ಯಾರಿಸ್‌ನ ಸ್ಟೇಡ್ ಡೆ ಫ್ರಾನ್ಸ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದ ನಂತರ, 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಲಾಸ್ ಏಜಂಲೀಸ್​ಗೆ ಆಯೋಜನೆಯ ಹಕ್ಕನ್ನು ಹಸ್ತಾಂತರಿಸಲಾಯಿತು.

ಈ ಭವ್ಯವಾದ ಕಾರ್ಯಕ್ರಮವನ್ನು ಮಾನವೀಯತೆಯ ಆಚರಣೆ ಎಂದು ಕರೆಯಲಾಗಿರುವುದು ವಿಶೇಷ. ಇನ್ನು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 9000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಹಾಗೆಯೇ ಅವರನ್ನು 270 ಪ್ರದರ್ಶಕರು ಮತ್ತು ಕಲಾವಿದರು ರಂಜಿಸಿರುವುದು ವಿಶೇಷ.

ಪ್ಯಾರಿಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿ ಶೂಟರ್ ಮನು ಭಾಕರ್ ಹಾಗೂ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಕಾಣಿಸಿಕೊಂಡಿದ್ದರು.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು 6 ಪದಕಗಳನ್ನು ಮಾತ್ರ ಗೆದ್ದುಕೊಂಡಿದ್ದಾರೆ. ಈ ಮೂಲಕ ಪದಕ ಪಟ್ಟಿಯಲ್ಲಿ 71ನೇ ಸ್ಥಾನ ಪಡೆದುಕೊಂಡಿದೆ.

ಭಾರತದ ಪರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕ್ರೀಡಾಳುಗಳ ಪಟ್ಟಿ ಈ ಕೆಳಗಿನಂತಿದೆ…

  • ಮನು ಭಾಕರ್: ಮಹಿಳೆಯರ 10 ಮೀ ಏರ್ ಪಿಸ್ತೂಲ್- ಕಂಚು
    ಮನು ಭಾಕರ್, ಸರಬ್ಜೋತ್ ಸಿಂಗ್: 10 ಮೀ ಏರ್ ಪಿಸ್ತೂಲ್ (ಮಿಶ್ರ ತಂಡ)- ಕಂಚು
    ಸ್ವಪ್ನಿಲ್ ಕುಸಾಲೆ: 50 ಮೀ ರೈಫಲ್ 3 ಸ್ಥಾನ- ಕಂಚು
    ಟೀಮ್ ಇಂಡಿಯಾ: ಪುರುಷರ ಹಾಕಿ- ಕಂಚು
    ನೀರಜ್ ಚೋಪ್ರಾ: ಪುರುಷರ ಜಾವೆಲಿನ್ ಥ್ರೋ- ಬೆಳ್ಳಿ
    ಅಮನ್ ಸೆಹ್ರಾವತ್: ಪುರುಷರ ಕುಸ್ತಿ ಫ್ರೀಸ್ಟೈಲ್ 57 ಕೆ.ಜಿ- ಕಂಚು1

Related Articles

Latest Articles