ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಿಯಾದ ಬಳಿಕ ಇಟಲಿಯಲ್ಲಿ ನಡೆಯುತ್ತಿರುವ 50ನೇ G7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಇಟಲಿಯ ಮಹಿಳಾ ಪ್ರಧಾನಿ ಜಾರ್ಜಿಯಾ ಮೆಲೋನಿಯವರು ಕಿಸ್, ಹಗ್ ಮಾಡದೇ ಕೇವಲ ನಮಸ್ಕಾರ ಎಂದು ಕೈ ಮುಗಿದಿದ್ದಾರೆ.
G7 ಶೃಂಗಸಭೆಗೆ ಆಗಮಿಸಿದ ಇಂಗ್ಲೆಂಡ್ನ ಪ್ರಧಾನಿ ರಿಷಿ ಸುನಕ್ ಅವರನ್ನು ಇಟಲಿಯ ಪ್ರಧಾನಿ ಮೆಲೋನಿಯವರು ಕಿಸ್ ಮಾಡಿ, ಹಗ್ ಮಾಡಿ ಹೃದಯ ತುಂಬಿ ಸ್ವಾಗತ ಕೋರಿದರು. ಅದರಂತೆ G7 ಶೃಂಗಸಭೆಯಲ್ಲಿ ಭಾರತದ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದರು. ಈ ವೇಳೆ ಮೋದಿಯವರನ್ನು ಸ್ವಾಗತ ಮಾಡಿದ ಇಟಲಿ ಪ್ರಧಾನಿ ಮೆಲೋನಿಯವರು ಕಿಸ್, ಹಗ್ ಯಾವುದನ್ನು ಮಾಡದೇ ಕೇವಲ ನಮಸ್ಕಾರ ಮಾಡಿ ಬರಮಾಡಿಕೊಂಡರು. ಬಳಿಕ ಫೋಟೋಗೆ ಪೋಸ್ ನೀಡಿ ತಮ್ಮ ಆಸನಗಳಲ್ಲಿ ಕುಳಿತರು ಎಂದು ಹೇಳಲಾಗಿದೆ.
ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಬಳಿಕ ಚರ್ಚೆ ನಡೆಸಿದರು. ಪ್ರಧಾನಿ ಮೋದಿಯವರು ಇಟಲಿಯ ಭೇಟಿಯ ಭಾಗವಾಗಿ ಜಿ7 ಔಟ್ರೀಚ್ ಸೆಷನ್ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎನರ್ಜಿ, ಆಫ್ರಿಕಾ-ಮೆಡಿಟರೇನಿಯನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಪ್ರಧಾನಿ ಮೆಲೋನಿ ಆಯೋಜಿಸಲಿದ್ದಾರೆ. ಇದರಲ್ಲಿ ವ್ಯಾಟಿಕನ್ ಸಿಟಿಯ ಪೋಪ್ ಫ್ರಾನ್ಸಿಸ್ ಸೇರಿ ಇತರ ಗಣ್ಯ ನಾಯಕರು ಭಾಗವಹಿಸಲಿದ್ದಾರೆ.