ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಅಲ್ಲಿ ಸಿಲುಕಿದ್ದಂತ ವಿವಿಧ ದೇಶಗಳ ನಾಗರೀಕರು ಸುರಕ್ಷಿತವಾಗಿ ಸ್ಥಳಾಂತರಗೊಳಿಸೋ ಸಲುವಾಗಿ ಸುರಕ್ಷಿತ ಕಾರಿಡಾರ್ ಅನ್ನು ರಷ್ಯಾ ಘೋಷಣೆ ಮಾಡಿತ್ತು. ಇದೇ ಮಾದರಿಯಲ್ಲಿ ಗಾಝಾ ಮೇಲೆ ದಾಳಿ ಮಾಡುತ್ತಿರುವಂತ ಇಸ್ರೇಲ್, ಅಲ್ಲಿರುವಂತ ನಾಗರೀಕರು ಸುರಕ್ಷಿತವಾಗಿ ಸ್ಥಳಾಂತರ ಗೊಳ್ಳೋದಕ್ಕೆ 3 ಗಂಟೆಗಳ ಸುರಕ್ಷಿತ ಕಾರಿಡಾರ್ ಘೋಷಿಸಿದೆ.
ಗಾಝಾ ಪಟ್ಟಿಯ ನಿವಾಸಿಗಳಿಗೆ ತನ್ನ ಪಡೆಗಳು ನೆಲದ ದಾಳಿಯನ್ನು ಪ್ರಾರಂಭಿಸುವ ಮೊದಲು ಕಡಲತೀರದ ಪ್ರದೇಶದ ದಕ್ಷಿಣ ಭಾಗಗಳಿಗೆ ಸ್ಥಳಾಂತರಗೊಳ್ಳುವಂತೆ 24 ಗಂಟೆಗಳ ಅಂತಿಮ ಗಡುವು ನೀಡಿದ ನಂತರ, ಇಸ್ರೇಲ್ ಮಿಲಿಟರಿ ಈಗ ಉತ್ತರ ಗಾಝಾದಲ್ಲಿ ಸುರಕ್ಷಿತ ಕಾರಿಡಾರ್ ಅನ್ನು ತೆರೆದಿದೆ.
“ಗಾಜಾ ನಗರ ಮತ್ತು ಉತ್ತರ ಗಾಝಾದ ನಿವಾಸಿಗಳೇ, ಕಳೆದ ದಿನಗಳಲ್ಲಿ, ನಿಮ್ಮ ಸುರಕ್ಷತೆಗಾಗಿ ದಕ್ಷಿಣ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸಿದ್ದೇವೆ. ರಾತ್ರಿ 10 ರಿಂದ ಮಧ್ಯಾಹ್ನ 1 ರವರೆಗೆ ಐಡಿಎಫ್ ಈ ಮಾರ್ಗದಲ್ಲಿ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ” ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.