ನಮ್ಮ ಭಾರತದ ಪುಣ್ಯಭೂಮಿಯಲ್ಲಿ ಲಕ್ಷಾಂತರ ಗುಡಿ ಗೋಪುರಗಳಿದ್ದು ಅಲ್ಲಿನ ವಾಸ್ತುಶಿಲ್ಪ ಅಥವಾ ನಡೆಯುವ ಪವಾಡಗಳು ನಮ್ಮನ್ನು ಅಚ್ಚರಿಗೊಳಿಸುತ್ತದೆ. ನಾವೆಲ್ಲಾ ದೇಗುಲದಲ್ಲಿರುವ ಮೂರ್ತಿಗಳಿಗೆ ಅಭಿಷೇಕ ಮಾಡುವುದನ್ನು ಕಂಡು ಕೇಳಿದ್ದೇವೆ. ಅದರಲ್ಲಿ ಏನು ವಿಶೇಷ? ಹೌದು ಇಲ್ಲೊಂದು ದೇಗುಲ ಪವಾಡವನ್ನೇ ಸೃಷ್ಟಿಸುತ್ತಿದೆ. ತರ್ಕಕ್ಕೆ ಸಿಗದ ಈ ವಿದ್ಯಾಮಾನ ಭಕ್ತರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಿದೆ.

ಹೌದು. ದೇಗುಲದಲ್ಲಿರುವ ವಿಗ್ರಹವೇ ಇಲ್ಲಿನ ಪ್ರಮುಖ ಆಕರ್ಷಣೆ. ಯಾಕೆಂದರೆ ಇಲ್ಲಿ ನಡೆಯುವ ಅಭಿಷೇಕದ ನೀರು ಪಾದ ಇಳಿಯುತ್ತಿದ್ದಂತೆ ತನ್ನ ಉಷ್ಣಾಂಶವನ್ನು ಬದಲಾಯಿಸುತ್ತದೆ.

ರಾಯಚೂರು ಜಿಲ್ಲೆಯಲ್ಲಿ ದೇಗುಲವೊಂದರಲ್ಲಿ ವಿಸ್ಮಯ ಗೋಚರವಾಗಿರುವುದು ಬಾರಿ ಚರ್ಚೆಯಾಗುತ್ತಿದೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿನ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಪವಾಡವೊಂದು ಬೆಳಕಿಗೆ ಬಂದಿದೆ. ಇಲ್ಲಿ ದೇವರ ಮೂರ್ತಿಯ ತಲೆಯ ಮೇಲೆ ಸುಡುವ ಬಿಸಿ ನೀರನಿಂದ ಜಲಾಭಿಷೇಕ ಮಾಡಿದ್ರೆ, ನೀರು ಪಾದ ತಲುಪುವಾಗ ತಣ್ಣೀರಾಗಿ ಮಾರ್ಪಡುತ್ತಿದೆ. ಇದು ಅಲ್ಲಿಯ ಆರ್ಚಕರಿಗೆ ವಿಸ್ಮಯ ಮೂಡಿಸಿದಲ್ಲದೇ, ಜನರಿಗೆ ಅಚ್ಚರಿ ಹುಟ್ಟಿಸಿದೆ. ಭಕ್ತರು ಇದು ಸ್ವಾಮಿಯ ಪವಾಡ ಎಂದುನಂಬಿದ್ದಾರೆ. ಇದು ವಿಜ್ಞಾನ ಲೋಕಕ್ಕೂ ಅಚ್ಚರಿ ಉಂಟು ಮಾಡಿದೆ. ಮೂರ್ತಿಯ ಪಾದಕ್ಕೆ ಬಿಸಿ ನೀರಿನ ಜಲಾಭಿಷೇಕ ಮಾಡಿದ್ರೆ, ಬಿಸಿಯಾಗಿಯೇ ಇರುತ್ತದೆ. ಆದರೆ ತಲೆಗೆ ಅಭಿಷೇಕ ಮಾಡಿದರೆ ಪಾದ ತಲುಪುವಾಗ ನೀರು ತಣ್ಣೀರಾಗಿ ಬದಲಾಗುತ್ತಿದೆ. ಈ ಪವಾಡ ಅಚ್ಚರಿ ಹಾಗೂ ನಾನಾ ಚರ್ಚೆಗೆ ಗ್ರಾಸವಾಗಿದೆ.
ಗಬ್ಬೂರು ರಾಯಚೂರು ಜಿಲ್ಲೆಯ ದೇವಾಲಯಗಳ ಪಟ್ಟಣ ಎಂದು ಕರೆಯಲ್ಪಡುತ್ತದೆ. ಪಟ್ಟಣದಲ್ಲಿ 30 ದೇವಾಲಯಗಳು ಮತ್ತು 28 ಶಿಲಾ ಶಾಸನಗಳಿವೆ. ಪ್ರಾಚೀನ ಕಾಲದಲ್ಲಿ, ಗಬ್ಬೂರ್ ಅನ್ನು ಗರ್ಭಪುರ ಮತ್ತು ಗೋಪುರಗ್ರಾಮ ಎಂದೂ ಕರೆಯಲಾಗುತ್ತಿತ್ತು.. ಇವುಗಳಲ್ಲಿ ಹಲವು ದೇವಾಲಯಗಳನ್ನು ಕಲ್ಯಾಣಿ ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ.