ಕಾಡಾನೆಯೊಂದನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅರ್ಜುನ ಬಲಿಯಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.
ಒಟ್ಟು ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿರುವ ಕೀರ್ತಿ ಸಂಪಾದಿಸಿದ್ದ ಅರ್ಜುನ ಆನೆ ಸಾವಿನ ಬಗ್ಗೆ ವಿವಾದಗಳೂ ಸಹ ಹುಟ್ಟಿಕೊಳ್ಳುತ್ತಿವೆ.
ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಜನಸಾಮಾನ್ಯರು ಹಾಗೂ ಮಾವುತರು ಕಿಡಿಕಾರಿದ್ದಾರೆ.
ತೀವ್ರವಾಗಿ ಗಾಯಗೊಂಡು ಅಸುನೀಗಿದ ಅರ್ಜುನನಿಗೆ ಹಾಸನ ಜಿಲ್ಲೆಯ ಸಕಲೇಶಪುರದ ಬಳಿಯ ದಬ್ಬಳ್ಳಿಕಟ್ಟೆಯಲ್ಲಿರುವ ಕೆಎಫ್‌ಟಿಸಿ ನೆಡುತೋಪಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಅರ್ಜುನನ ಮಾವುತ ವಿನು ಇನ್ನೆಂದೂ ಬಾರದ ಅರ್ಜುನನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತು ಅರ್ಜುನನ ಜತೆ ತನ್ನನ್ನೂ ಸಹ ಮಣ್ಣು ಮಾಡಿ ಎಂದು ಗೋಳಿಡುತ್ತಿದ್ದರು.