Tuesday, April 22, 2025

ದೇಗುಲದ ಮೇಲೆ‌ ದಾಳಿ ಮಾಡಲು ಪ್ರಚೋದನೆ; ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ವಿರುದ್ಧ ಎಫ್‌ಐಆರ್

ಕಳೆದ ವಾರ ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಮೇಲಿನ ದಾಳಿಯ ನಂತರ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.‌ ಜುಬೈರ್, ಅರ್ಷದ್ ಮದನಿ ಮತ್ತು ಅಸಾದುದ್ದೀನ್ ಓವೈಸಿ ಸೇರಿದಂತೆ ಇತರ ಇಬ್ಬರು ಮುಸ್ಲಿಂ ನಾಯಕರು ದೇಶಾದ್ಯಂತ ಮುಸ್ಲಿಮರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಎಂಬುವುದಾಗಿ ಆರೋಪಿಸಲಾಗಿದೆ.

ಅಕ್ಟೋಬರ್ 5 ರಂದು ಶಿವಶಕ್ತಿ ಧಾಮಕ್ಕೆ ಮುತ್ತಿಗೆ ಹಾಕಲು ದುಷ್ಕರ್ಮಿಗಳ ಗುಂಪು ಪ್ರಯತ್ನಿಸಿದ್ದವು. ದೇವಾಲಯದ ದಾಳಿಯ ನಂತರ ಬಿಜೆಪಿ ನಾಯಕಿ ಡಾ ಉದಿತಾ ತ್ಯಾಗಿ ಅವರು ಅಕ್ಟೋಬರ್ 7 ರಂದು ಗಾಜಿಯಾಬಾದ್‌ನ ವೆಬ್ ಸಿಟಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಜುಬೈರ್ ಶೇರ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು.

ದಾಸ್ನಾದಲ್ಲಿರುವ ಶಿವಶಕ್ತಿ ಧಾಮದ ವಿರುದ್ಧ ದುಷ್ಕರ್ಮಿಗಳು ನಡೆಸಿದ ದಾಳಿ ಪೂರ್ವಯೋಜಿತ ಪಿತೂರಿಯಾಗಿದೆ ಎಂದು ಉದಿತಾ ತ್ಯಾಗಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಓವೈಸಿ, ಜುಬೇರ್, ಮದನಿ ಮತ್ತು ಇತರ ಮುಸ್ಲಿಂ ನಾಯಕರು ಯತಿ ನರಸಿಂಹಾನಂದ ಸರಸ್ವತಿ ಅವರನ್ನು ಕೊಲ್ಲಲು ಸಾರ್ವಜನಿಕರನ್ನು ನಿರಂತರವಾಗಿ ಪ್ರಚೋದಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕೋಮು ಉನ್ಮಾದವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರನ್ನು ಕೋರಿದ್ದರು. ಯತಿ ನರಸಿಂಹಾನಂದ ಅವರನ್ನು ಬಿಡುಗಡೆ ಮಾಡಬೇಕು ಮತ್ತು ಸೂಕ್ತ ಭದ್ರತೆ ನೀಡಬೇಕು ಎಂದು ತ್ಯಾಗಿ ಒತ್ತಾಯಿಸಿದ್ದಾರೆ.

ಜುಬೈರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 196, 228, 299, 356 (3), ಮತ್ತು 351 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಡಾ ತ್ಯಾಗಿ ಅವರು ನಿರಂತರವಾಗಿ ಪ್ರಚೋದನಕಾರಿ ಎಂದು ಹೇಳಿರುವ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

Related Articles

Latest Articles