ಸಾಮಾಜಿಕ ಜಾಲತಾಣದಲ್ಲಿ ಆಗಿದ್ದಾಂಗೆ ಫೊಟೋಗಳು ವಿವಿಧ ಕ್ಯಾಪ್ಷನ್ ಗಳೊಂದಿಗೆ ವೈರಲ್ ಆಗುತ್ತದೆ. ನಮ್ಮ ಊರಿನ ಸೊಬಗು ಎಂದು ಸುದ್ದಿಯಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಫೋಟೋಗಳು ಇಂತಹ ಊರಿನದ್ದೂ ಎಂದು ಹರಿದಾಡುತ್ತದೆ.
ಕೆಲವೊಂದು ಮಂದಿ ಮಾಡುವ ತಪ್ಪುಗಳು ಎಲ್ಲರನ್ನು ನಂಬುವಂತೆ ಮಾಡುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಉಕ್ಕಿ ಹರಿಯುವ ನದಿಗಳು, ಕೆರೆಕೊಳ್ಳಗಳು, ಜಲಪಾತ, ಪ್ರವಾಹ ಹೀಗೆ ಅನೇಕ ವಿಡಿಯೋಗಳು ವೈರಲ್ ಆಗುತ್ತಿದೆ.
ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಪ್ರವಾಹದ ನಡುವೆ ಬಾವಿಯೊಂದು ಸ್ವಚ್ಛ ನೀಲ ಬಣ್ಣದಲ್ಲಿ ಕಂಗೊಳಿಸುವ ಫೋಟೊ ವಿಡಿಯೋ ವೈರಲ್ ಆಗಿತ್ತು. ಇದು ದಕ್ಷಿಣ ಕನ್ನಡ ಉಪ್ಪಿನಂಗಡಿ ಸಮೀಪದ್ದೂ ಎಂಬ ತಲೆಬರಹದೊಂದಿಗೆ ವೈರಲ್ ಆಗಿತ್ತು.
watch video: https://www.facebook.com/share/v/Xcy6QgCKvmrna1aW/?mibextid=FQVVTg
ಸದ್ಯ ಇದು ಚರ್ಚೆಗೆ ಗ್ರಾಸವಾಗಿದೆ. ಬಿಟಿವಿ ಫೇಸ್‌ಬುಕ್ ಖಾತೆಯಲ್ಲಿ ಇದರ ಸುದ್ದಿ ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಫೇಸ್‌ಬುಕ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇದು ಉಡುಪಿಯ ಬಳಿಯ ಚಿತ್ರಣ ಎಂಬುವುದಾಗಿ ಕಮೆಂಟ್ ಮಾಡಿದ್ದಾರೆ.
ಇದ್ಯ ಈ ವಿಷಯ ಚರ್ಚೆ ಸೃಷ್ಟಿಸಿದೆ. ಇದು ಎಲ್ಲಿಯ ಸ್ಥಳ ಎಂಬುವುದು ಇನ್ನಷ್ಟೇ ಖಚಿತವಾಗಬೇಕಾಗಿದೆ.