ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿರುವುದು ಕೇಳಿದ್ದೇವೆ. ಅಪರೂಪಕ್ಕೆ ವಿಷಕಾರಿ ಹೂಗಳ ಬಗ್ಗೆಯೂ ತಿಳಿದುಕೊಂಡಿದ್ದೇವೆ. ಆದರೆ ಹೂವು ಹೃದಯಾಘಾತಕ್ಕೆ ಕಾರಣ ಆಗಬಹುದೆಂದು ಅಧ್ಯಯನ ತಿಳಿಸಿಕೊಟ್ಟಿದೆ.
ಫಾಕ್ಸ್‌ಗ್ಲೋವ್ ಹೂವಿನ ಗಿಡ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಅಮೆರಿಕದ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ. ಹೃದಯವು ಸಾವಿರಾರು ಹೃದಯ ಕೋಶಗಳ ಮೂಲಕ ದೇಹದ ಸುತ್ತಲೂ ರಕ್ತವನ್ನು ಪಂಪ್ ಮಾಡುತ್ತದೆ. ಹೃದಯದ ಮೇಲೆ ಬಲವಾದ ಪರಿಣಾಮ ಬೀರುವ ಡಿಗೋಕ್ಸಿನ್‌ನಂತಹ ಶಕ್ತಿಯುಕ್ತ ಸಂಯುಕ್ತಗಳನ್ನು ಫಾಕ್ಸ್‌ಗ್ಲೋವ್ ಹೊಂದಿದೆ.
ಕಾರ್ಡಿಯಾಕ್ ಗೈಕೋಸೈಡ್‌ಗಳನ್ನು ಉತ್ಪಾದಿಸುವ ಫಾಕ್ಸ್‌ಗ್ಲೋವ್‌ಗಳು ಹೃದಯ ಕೋಶಗಳಲ್ಲಿನ ಸೋಡಿಯಂ, ಪೊಟ್ಯಾಸಿಯಮ್ ಪಂಪ್ ಕಾರ್ಯವನ್ನು ಪ್ರತಿಬಂಧಿಸುತ್ತದೆ. ಇದು ಹೃದಯ ಗಟ್ಟಿಯಾಗಿ ಮತ್ತು ವೇಗವಾಗಿ ಬಡಿದುಕೊಳ್ಳುವಂತೆ ಮಾಡುತ್ತದೆ.
ಇದರಿಂದ ಹೃದಯ ಸ್ತಂಭನ ಆಗುವ ಸಾಧ್ಯತೆಗಳಿದೆ ಎಂದು ತಜ್ಞರು ತಿಳಿಸಿದ್ದಾರೆ. ಗುಲಾಬಿ, ನೇರಳೆ, ಬಿಳಿ ಮತ್ತು ಹಳದಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಕಾಣಸಿಗುವ ಫಾಕ್ಸ್ ಗೋವ ಮೂಲತಃ ಯುರೋಪ್ ಮತ್ತು ಉತ್ತರ ಆಫ್ರಿಕಾದಿಂದ ಈಗ ಅಮೆರಿಕದಾದ ತೋಟಗಳಲ್ಲಿ ಅರಳುವುದನ್ನು ಕಾಣಬಹುದು.
ಗಿಡಮೂಲಿಕೆ ಔಷಧದಲ್ಲಿ ಇತಿಹಾಸ ಹೊಂದಿರುವ ಪಾಕ್ಸ್ ಗ್ಲೋವ್ ಬಗ್ಗೆ ಜನಪ್ರಿಯ ಗಾದೆ ಮಾತಿದೆ. ಫಾಕ್ಸ್ ಗ್ಲೋವ್‌ನಿಂದ ಸತ್ತವರನ್ನು ಎಬ್ಬಿಸಬಹುದು ಮತ್ತು ಜೀವಂತವಾಗಿರುವವರನ್ನು ಕೊಲ್ಲಬಹುದು ಎಂದು ಹೇಳುತ್ತಾರೆ.
ಹೃದಯಾಘಾತದ ಸಂದರ್ಭದಲ್ಲಿ ಇತರ ಔಷಧ ವಿಫಲವಾದಾಗ ಡಿಗೋಕ್ಸಿನ್ ಅನ್ನು ಪ್ರಾಯೋಗಿಕವಾಗಿ ಸೂಚಿಸಲಾಗುತ್ತದೆ ಎಂದು ಡಾ.ಝನ್ ವಾಂಗ್ ಹೇಳಿದ್ದಾರೆ.
- ಕಾಸರಗೋಡು: ಆಟೋ ರಿಕ್ಷಾ ಚಾಲಕ ಆತ್ಮಹತ್ಯೆ – ಸಬ್ ಇನ್ಸ್ ಪೆಕ್ಟರ್ ಅಮಾನತು
- ರಮ್ಮಿ ಆಡಲು ಬ್ಯಾಂಕ್ನಿಂದ 20 ಲಕ್ಷಕ್ಕೂ ಹೆಚ್ಚು ಸಾಲ; ಬ್ಯಾಂಕ್ ಉದ್ಯೋಗಿ ನಾಪತ್ತೆ
- ಮಂಗಳೂರು ದಸರಾ: ಶಾರದಾ ಮಾತೆ, ನವದುರ್ಗೆಯರ ಮೂರ್ತಿಯ ತಯಾರಕರು ಇವರೇ ನೋಡಿ!
- ರತನ್ ಟಾಟಾ ಅಸ್ತಂಗತ; ಮೋದಿ ಸಂತಾಪ
- ಧಾರಾಕಾರ ಮಳೆ: ಚಾರ್ಮಾಡಿ ಘಾಟ್ನಲ್ಲಿ ಮತ್ತೊಮ್ಮೆ ಗುಡ್ಡ ಕುಸಿತ – ಹೆಚ್ಚಿದ ಟ್ರಾಫಿಕ್ ಜಾಮ್
- ಕಾಸರಗೋಡು: ಕೇಂದ್ರ ಸರ್ಕಾರಿ ನೌಕರಿ ನೀಡುವುದಾಗಿ ಹೇಳಿ ಲಕ್ಷಾಂತರ ರೂ ವಂಚಿಸಿದ DYFI ಮುಖಂಡೆ ಸಚಿತಾ