ಪಟಾಕಿ ಜೊತೆ ಹುಚ್ಚಾಟ ಬೇಡ. ಇದರಿಂದ ಪ್ರಾಣ ಹಾನಿ ಆಗುತ್ತದೆ ಎಂದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಅಪಾಯಕಾರಿ ಪಟಾಕಿ ಜೊತೆ ಹುಡುಗಾಟ ಬೇಡವೆಂದಯ ಸಾಕಷ್ಟು ಬಾರಿ ಸಲಹೆ ನೀಡಿದರೂ ಕೆಲ ಹುಡುಗರು ಅದನ್ನ ಕಿವಿಗೆ ಹಾಕಿಕೊಳ್ಳದೇ ಜೀವಕ್ಕೆ ಕುತ್ತು ತಂದುಕೊಂಡಿರುವ ಹಲವು ಘಟನೆಗಳು ನಡೆದಿವೆ. ಅದೇ ರೀತಿಯಾಗಿ ಸ್ನೇಹಿತರ ಗ್ಯಾಂಗೊಂದು ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿಸುವ ವಿಚಾರಕ್ಕೆ ಚಾಲೆಂಜ್ ಮಾಡಿ ಓರ್ವ ವ್ಯಕ್ತಿಯ ಸಾವಿಗೆ ಕಾರಣರಾಗಿದ್ದಾರೆ.
ನಗರದ ಕೋಣನಕುಂಟೆ ವ್ಯಾಪ್ತಿಯ ವಿವರ್ಸ್ ಕಾಲೋನಿಯಲ್ಲಿ ಈ ಹುಚ್ಚಾಟ ನಡೆದಿದ್ದು ಯುವಕ ಶಬರಿ ಸಾವನ್ನಪ್ಪಿದ್ದಾನೆ. ಯುವಕರ ಹುಚ್ಚಾಟ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಕೋಣನಕುಂಟೆ ವ್ಯಾಪ್ತಿಯ ವಿವರ್ಸ್ ಕಾಲೋನಿಯಲ್ಲಿ ಈ ಹುಚ್ಚಾಟ ನಡೆದಿದ್ದು ಯುವಕ ಶಬರಿ ಸಾವನ್ನಪ್ಪಿದ್ದಾನೆ. ಯುವಕರ ಹುಚ್ಚಾಟ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.