ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ.
ಸಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ಗಳಿಗೆ ಲೈಕ್ ಹಾಕಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶರಣಪ್ಪ ಬಸವರಾಜ ಹಾಗೂ ಶಹನಾಜ್ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ಆ ಮೂಲಕ ರಿಯಾಕ್ಟ್ ಮಾಡಿದವರಿಗೂ ಬಿಸಿ ಮುಟ್ಟಿದೆ.
- ಮಂಗಳೂರು: ‘ಜನೌಷಧಿ ಕೇಂದ್ರ ಮುಚ್ಚಿಸುತ್ತಿರುವ ಜನ ವಿರೋಧಿ ಕಾಂಗ್ರೆಸ್ ಸರ್ಕಾರ’- ಸಂಸದ ಕ್ಯಾ. ಚೌಟ ಆಕ್ರೋಶ
- ಅಬಕಾರಿ ಅಧಿಕಾರಿಗಳಿಂದ ಅನ್ಯರಾಜ್ಯದ ಕಾರ್ಮಿಕರ ದರೋಡೆ – ನಾಲ್ವರ ಬಂಧನ
- ದ್ವಿಚಕ್ರ ವಾಹನ ಮೇಲೆ ವಿದ್ಯುತ್ ತಂತಿ ಬಿದ್ದು ಯುವ ಯಕ್ಷಗಾನ ಕಲಾವಿದ ಮೃತ್ಯು
- ವಿಶ್ವದ ಅತ್ಯಂತ ದುಬಾರಿ ಬೆಲೆಯ ಮಾವು.. ಒಂದು ಹಣ್ಣಿನ ಬೆಲೆ ಬರೋಬ್ಬರಿ 10 ಸಾವಿರ ರೂಪಾಯಿ
- ರಾಜ್ಯಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
_dj_bharath_2008 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ಸುಹಾಸ್ ಅಣ್ಣನ ಕೊಂದವರು ಹಾಗೂ ಕೊಂದವರಿಗೆ ಸಹಾಯ ಮಾಡಿದವರೆಲ್ಲರ ರಕ್ತ ಹರಿಯಬೇಕು. ಆಗ ಮಾತ್ರ ಸುಹಾಸ್ ಅಣ್ಣನ ಆತ್ಮಕ್ಕೆ ಶಾಂತಿಸಿಗುತ್ತೆ ನೆನಪಿಟ್ಟುಕೊಳ್ಳಿ” ಎಂಬುದಾಗಿ ಪೋಸ್ಟ್ ಹಾಕಲಾಗಿತ್ತು. ಅದಕ್ಕೆ ಲೈಕ್ ಮಾಡಿದ್ದ ಬಿಜೈಯ ಶರಣಪ್ಪ ಬಸವರಾಜ ಎಂಬಾತನ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
karaavali_official ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ಪ್ರತಿರೋಧ ಅಪರಾಧವಲ್ಲ. ಮುಸ್ಲಿಮರು ನಪುಂಸಕರು ಅಲ್ಲ ನೆನಪಿರಲಿ, ತಾನು ಯಾವ ಕಾರಣಕ್ಕೆ ಕೊಲೆಯಾದೆ ಅನ್ನೊ ಅರಿವಿಲ್ಲದೆ ಖಬುರ್ಸ್ತಾನಲ್ಲಿ ಮಲಗಿರೋ ಅಮಾಯಕ ಪಾಝಿಲನ ಕೊಲೆ ಮಾಡಿದ ಇವನ ಸಾವನ್ನು ದುಃಖ ಪಡುವಷ್ಟು ಮೂರ್ಖ ನಾನಲ್ಲ…..Targe 6 Peace baki inshallah” ಎಂದು ಮಾಡಿದ ಪೋಸ್ಟ್ಗೆ ಲೈಕ್ ಮಾಡಿದ್ದ ಬಜ್ಪೆಯ ಶಹನಾಝ್ ಎಂಬಾಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.