Friday, June 27, 2025

ಲಾಂಗ್, ಮಚ್ಚು ಹಿಡಿದು ರೀಲ್ಸ್..! ಬಿಗ್​ಬಾಸ್ ಮಾಜಿ ಸ್ಪರ್ಧಿಗಳ ಮೇಲೆ ಎಫ್​ಐಆರ್

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಲಾಂಗ್, ಮಚ್ಚು ಹಿಡಿದು ರೀಲ್ಸ್‌ ಮಾಡಿ ಇಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ. ಕನ್ನಡ ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್​ಗೌಡ, ರಜತ್ ಕಿಶನ್ ರೀಲ್ಸ್ ಮಾಡಿದ್ದಕ್ಕಾಗಿ ಕೇಸ್ ದಾಖಲಾಗಿದೆ.

ಬೆಂಗಳೂರಿನ ಬಸವೇಶ್ವರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಗ್ಲಾಸ್​, ಕೈಯಲ್ಲಿ ಲಾಂಗು ಹಿಡಿದು ನಟ ದರ್ಶನ್​ ಅವರ ಅಭಿನಯದ ಮೆಜೆಸ್ಟಿಕ್ ಹಾಡಿಗೆ ಸ್ಲೋ ಮೋಷನ್ ವಾಕ್​ ಮಾಡಿದ್ದರು. ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದರು ಎಂಬ ಕಾರಣಕ್ಕೆ ಎಫ್‌ಐಆರ್‍ ದಾಖಲಾಗಿದೆಯಂತೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.

ಇದೀಗ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಸದ್ಯದಲ್ಲೇ ತನಿಖೆಗೆ ಆರೋಪಿಗಳನ್ನು ಕರೆಸಿಕೊಳ್ಳಲಿದ್ದಾರೆ. ವಿಡಿಯೋ ನೋಡಿದ ಸಾರ್ವಜನಿಕರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಬೆನ್ನಲ್ಲೇ ರಜತ್ ಕಿಶನ್ ಅವರ ಇನ್​ಸ್ಟಾಗ್ರಾಮ್​​ನಿಂದ ಆ ರೀಲ್ಸ್ ಡಿಲೀಟ್ ಆಗಿದೆ.

Related Articles

Latest Articles