ಇಲ್ಲೊಬ್ಬರು ತಂದೆ ತಮ್ಮ ಮಗ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದನೆಂಬ ಹೆಮ್ಮೆ ಮತ್ತು ಖುಷಿಗೆ ಆತನಿಗೆ 1.80 ಲಕ್ಷ ಬೆಲೆಯ ಐಫೋನ್ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಡ ವ್ಯಕ್ತಿಯೊಬ್ಬರು ಯುವಕರು ಕೇಳಿದ್ದಕ್ಕೆ ತಮ್ಮ ಬಳಿ ಇದ್ದ ಐಫೋನ್ ತೋರಿಸುತ್ತಿರುವ ದೃಶ್ಯವನ್ನು ಕಾಣಬಹುದು. ನಾನು ಗುಜರಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದು, ನನ್ನ ಮಗ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಕ್ಕಾಗಿ ಅವನಿಗೆ 1.80 ಲಕ್ಷ ಮೌಲ್ಯದ ಐಫೋನ್ 16 ಫೋನ್ ಉಡುಗೊರೆಯಾಗಿ ನೀಡಿದ್ದೇನೆ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಗುಜರಿ ಪ್ಯಾಪಾರಿಯಾಗಿ ಕೆಲಸ ಮಾಡಿ ಜೀವನ ನಡೆಸುವ ಬಡ ವ್ಯಕ್ತಿಯೊಬ್ಬರು ತನ್ನ ಮಗನ ಸಾಧನೆಗೆ ಮೆಚ್ಚಿ 1.80 ಲಕ್ಷ ಬೆಲೆಯ ದುಬಾರಿ ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟಲ್ಲದೆ ತನಗಾಗಿ 85 ಸಾವಿರ ಮೌಲ್ಯದ ಐಪೋನ್ ಸಹ ಖರೀದಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ಮೊಬೈಲ್ ಕೊಟ್ಟಿದ್ದಕ್ಕೆ ಖುಷಿ ಪಟ್ಟರೆ ಕೆಲವರು ಮಕ್ಕಳಿಗೆ ಮೊಬೈಲ್ ಕೊಟ್ಟು ಹಾಳು ಮಾಡಬೇಡಿ ಎಂದಿದ್ದಾರೆ.