ಚಲಿಸುತ್ತಿದ್ದ ರೈಲಿನಿಂದ ಬಿದ್ದು ವಕೀಲ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಟೇಕಲ್ ಬಳಿ ನಡೆದಿದೆ.
ಚಿಕ್ಕಕುಂತೂರು ಗ್ರಾಮದ ಶ್ರೀಕಾಂತ್ ಮೃತ ವ್ಯಕ್ತಿ. ಬೆಂಗಳೂರು ಕೆ.ಆರ್.ಪುರಂನಿಂದ ಟೇಕಲ್ಗೆ ಹೋಗುವ ಮಾರ್ಗ ಮಧ್ಯೆ ಕಾವೇರಿ ಎಕ್ಸ್ಪ್ರೆಕ್ಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಸ್ಥಳಕ್ಕೆ ರೈಲ್ವೇ ಕಂಟ್ರೋನ್ಮೆಂಟ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ಮಾಡಿದ್ದಾರೆ. ಕಂಟ್ರೋನ್ಮೆಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.