ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯು ನರಮೇಧವಾಗಿದ್ದು, ಅದನ್ನು ತಡೆಯಲು ವಿಶ್ವಸಂಸ್ಥೆ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ವಿಶ್ವಸಂಸ್ಥೆಯ ನ್ಯೂಯಾರ್ಕ್ ನಗರದ ಉನ್ನತ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ.
ವಿಶ್ವಸಂಸ್ಥೆ ನಿರಾಶ್ರಿತರ ಏಜೆನ್ಸಿಯ ನ್ಯೂಯಾರ್ಕ್ ಕಚೇರಿಯ ನಿರ್ದೇಶಕ ಕ್ರೇಗ್ ಮೊಖಿಬರ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು, ರಾಜಿನಾಮೆ ಪತ್ರದಲ್ಲಿ ʼನಮ್ಮ ಅನೇಕ ಸಹೋದ್ಯೋಗಿಗಳು ಸೇರಿದಂತೆ ಜಗತ್ತಿಗೆ ಬಹಳ ದುಃಖ ಉಂಟಾಗಿರುವ ಈ ಕ್ಷಣದಲ್ಲಿ ನಾನು ಬರೆಯುತ್ತಿದ್ದೇನೆʼ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ವೋಲ್ಕರ್ ಟರ್ಕ್‌ಗೆ ತನ್ನ ರಾಜಿನಾಮೆ ಪತ್ರವನ್ನು ಕಳುಹಿಸಿದ ಕ್ರೇಗ್, ವಿಶ್ವಸಂಸ್ಥೆ ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾಗಿದೆ ಎಂದು ವಿವರಿಸಿದ್ದಾರೆ.
ಗಾಝಾದ ಮೇಲೆ ಇಸ್ರೇಲ್ ನಡೆಸುವ ದಾಳಿಯು ಫೆಲೆಸ್ತೀನಿಯರು ಅರೇಬಿಯನ್ನರು ಎನ್ನುವ ಕಾರಣದಿಂದ ನಡೆಯುತ್ತಿದೆ. ಇದು ಜನಾಂಗೀಯ ನರಮೇಧ ಮತ್ತು ವಂಶನಾಶ ಎಂದು ಕ್ರೇಗ್ ಹೇಳಿದ್ದಾರೆ.