ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ನಾಳೆ (ಜೂ.27) ಗಯಾನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಪ್ರವೇಶಿಸಲಿದೆ.
ಹೀಗಾಗಿ ಈ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಇದಕ್ಕೂ ಮುನ್ನ ಉಭಯ ತಂಡಗಳು ಟಿ20 ಕ್ರಿಕೆಟ್ನಲ್ಲಿ 23 ಬಾರಿ ಮುಖಾಮುಖಿಯಾಗಿವೆ. ಇದೀಗ ಟೀಮ್ ಇಂಡಿಯಾ ಎರಡು ವರ್ಷಗಳ ಹಳೆಯ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕಲ್ಲಿದೆ.
ಮತ್ತೊಂದು ಕಡೆ ಅಫ್ಘಾನಿಸ್ತಾನ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯಲಿದೆ. ಸೆಮಿಫೈನಲ್ನಲ್ಲಿ ಗೆದ್ದ ತಂಡಗಳು ಫೈನಲ್ ಪ್ರವೇಶ ಮಾಡಲಿವೆ. ಜೂನ್ 29 ರಂದು ಫೈನಲ್ ಪಂದ್ಯ ನಡೆಯಲಿದ್ದು, ಫೈನಲ್ನಲ್ಲಿ ಗೆದ್ದವರು ಟ್ರೋಫಿಗೆ ಮುತ್ತಿಡಲಿದೆ.