Tuesday, July 23, 2024

ಮತದಾನ ಮಾಡಿ..! ಎರಡು ಗಂಟೆಗೊಮ್ಮೆ ಲಕ್ಕಿ ಡ್ರಾ..! ಡೈಮಂಡ್ ರಿಂಗ್, ಟಿವಿ ಫ್ರಿಜ್‌, ಬೈಕ್‌ ಗೆಲ್ಲಿರಿ

ಮಧ್ಯಪ್ರದೇಶ: ಭೋಪಾಲ್‌ನಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಹೊಸ ಪ್ರಯತ್ನಕ್ಕೆ ಕೈಹಾಕಿದದೆ. ಆ ಮೂಲಕ ಮತದಾರರನ್ನು ಮತದಾನ ಮಾಡಲು ಪ್ರೇರೆಪಣೆ ನೀಡಲು ಸಜ್ಜಾಗಿದೆ. ವಿಶೇಷ ಲಕ್ಕಿ ಡ್ರಾ ಒಂದನ್ನು ಜಾರಿಗೆ ತಂದಿದೆ. ಮೇ 7 ರಂದು ಮತದಾನ ಮಾಡುವವರಿಗೆ ಲಕ್ಕಿ ಡ್ರಾದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ನಿಮ್ಮ ಬೆರಳಿಗೆ ಶಾಯಿಯ ಗುರುತು ಬಿದ್ದರೆ ವಜ್ರದ ಉಂಗುರವನ್ನು ಗೆಲ್ಲುವ ಅವಕಾಶವಿದೆ ಎಂದು ಹಾಕಿರುವ ಜಾಹೀರಾತು ಎಲ್ಲೆಡೆ ವೈರಲ್​​ ಆಗಿದೆ.

ಇದಲ್ಲದೇ ಮತದಾನ ಮಾಡಿದವರಿಗೆ ಟಿವಿ, ಫ್ರಿಜ್, ಸ್ಕೂಟರ್, ಬೈಕ್ ಗಳನ್ನೂ ಉಡುಗೊರೆಗಳನ್ನು ಗೆಲ್ಲುವ ಅವಕಾಶ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ ಎರಡು ಹಂತದ ಮತದಾನ ನಡೆದಿದ್ದು, ಮತದಾನದಲ್ಲಿ ಸಾಕಷ್ಟು ಇಳಿಕೆಗೆ ಕಂಡಿದ್ದು ಚುನಾವಣಾ ಆಯೋಗ ಆತಂಕಕ್ಕೆ ಒಳಗಾಗಿದೆ. ಮತದಾರರನ್ನು ಮತದಾನ ಮಾಡಲು ಉತ್ತೇಜಿಸಲು ಆಯೋಗವು ಇದೀಗ ಲಕ್ಕಿ ಡ್ರಾವನ್ನು ಘೋಷಿಸಿದೆ.

ಚುನಾವಣಾ ಆಯೋಗವು ಮತದಾನದ ದಿನದಂದು ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಲಕ್ಕಿ ಡ್ರಾ ಘೋಷಿಸಿದೆ. ಮತದಾನದ ನಂತರ ತಮ್ಮ ಶಾಯಿ ಗುರುತು ತೋರಿಸುವವರಿಗೆ ಡೈಮಂಡ್ ರಿಂಗ್, ರೆಫ್ರಿಜರೇಟರ್, ಟಿವಿ ಮತ್ತು ಇತರ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ ಎಂದು ಘೋಷಿಸಿದೆ.

ಮೂರನೇ ಹಂತದಲ್ಲಿ ಮೇ 7ರಂದು ಭೋಪಾಲ್‌ನಲ್ಲಿ ಮತದಾನ ನಡೆಯಲಿದೆ. ವಾಸ್ತವವಾಗಿ, ಈ ಬಾರಿ ಮಧ್ಯಪ್ರದೇಶದಲ್ಲಿ ಮತದಾನದ ಪ್ರಮಾಣವು ತುಂಬಾ ಕಡಿಮೆಯಾಗಿದೆ, ಮೊದಲ ಎರಡು ಹಂತಗಳಲ್ಲಿ ಸರಾಸರಿ ಶೇಕಡಾ 8.5 ಕ್ಕಿಂತ ಹೆಚ್ಚು ಇಳಿಕೆಯಾಗಿದೆ. ಭೋಪಾಲ್‌ನ ನಿವಾಸಿಗಳು ಮತದಾನದ ಬಗ್ಗೆ ಆಸಕ್ತಿ ತೋರದಿರುವುದು ಇದಕ್ಕೆ ಪ್ರಮುಖ ಕಾರಣ. 2019 ರಲ್ಲಿ, ಮತದಾನದ ಶೇಕಡಾವಾರು ಬೇರೆಡೆ ಹೆಚ್ಚಿದ್ದರೆ, ಭೋಪಾಲ್‌ನಲ್ಲಿ ಶೇಕಡಾ 65.7 ರಷ್ಟು ಮತದಾನವಾಗಿದೆ. ಅಷ್ಟರ ಮಟ್ಟಿಗೆ ಮತದಾನದ ಪ್ರಮಾಣ ಕುಸಿದಿದೆ. ಆದ್ದರಿಂದ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ.

Related Articles

Latest Articles