Tuesday, January 21, 2025

ಗುಡ್ಡ ಕುಸಿದ ಭೀಕರತೆ ಆರುವ ಮುನ್ನವೇ ವಯನಾಡಿನಲ್ಲಿ ಭೂಕಂಪನದ ಅನುಭವ

ಭೂಕುಸಿತದ ಕರಾಳ ಭೀಕರತೆಯನ್ನು ಅನುಭವಿಸಿದ ವಯನಾಡಿಗೆ ಈಗ ಭೂಕಂಪದ ಭೀತಿ ಎದುರಾಗಿದೆ. ಇಂದು ಬೆಳಗ್ಗೆ 10:15 ಕ್ಕೆ ವಯನಾಡಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಇತ್ತೀಚೆಗೆ ಭೂಕುಸಿತ ಸಂಭವಿಸಿದ ಚೂರಲ್ಮಲಾ – ಮುಂಡಕ್ಕೈ ಪ್ರದೇಶಗಳಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿರುವ ಅಂಬಲವಾಯಲ್-ಎಡಕಲ್ ಪ್ರದೇಶಗಳಲ್ಲಿ ಬೆಳಗ್ಗೆ ಗುಡುಗು ಸದ್ದು ಕೇಳಿಸಿತು ಎನ್ನಲಾಗಿದೆ

ಪಕ್ಕದ ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಭಾಗಗಳಿಂದ ಇದೇ ರೀತಿಯ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ. ಶಬ್ದ ಕೇಳಿ ಅಂಬಲವಾಯಲ್-ಎಡಕಲ್ ಭಾಗದ ಜನರು ಮನೆಯಿಂದ ಹೊರ ಬಂದರು. ಈ ಪ್ರದೇಶದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪರಿಹಾರ ಶಿಬಿರದಲ್ಲಿ ಹಲವು ಕುಟುಂಬಗಳು ಆಶ್ರಯ ಪಡೆದಿವೆ.

ಆರಂಭದಲ್ಲಿ ಗುಡುಗು ಇರಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಶಬ್ದವು ಭೂಮಿಯ ಮೇಲ್ಮೈಯಿಂದ ಬಂದಿದೆ. ಹಲವರಿಗೆ ತಮ್ಮ ಮನೆಯ ಕಿಟಕಿ ಗಾಜುಗಳು ಅಲುಗಾಡಿರುವ ಅನುಭವವಾಗಿದೆ. ಭೂಕುಸಿತದ ತೀವ್ರತೆಯನ್ನು ಮೌಲ್ಯಮಾಪನ ಮಾಡಲು ಕೇಂದ್ರದ ತಜ್ಞರ ತಂಡವು ಈಗಾಗಲೇ ವಯನಾಡು ಪ್ರದೇಶಕ್ಕೆ ಭೇಟಿ ನೀಡುತ್ತಿದೆ.

Related Articles

Latest Articles