Wednesday, February 5, 2025

BBK10: ಡ್ರೋಸ್ ಪ್ರತಾಪ್ ಸೋತಿದ್ದಕ್ಕೆ ಈ ರೀತಿ ಮಾಡೋದಾ..? ವೈರಲ್ ಆದ ದಕ್ಷಿಣ ಕನ್ನಡದ ಯುವಕ

ಕನ್ನಡದ ಬಿಗ್ ಬಾಸ್ 10 ಹಲವು ಏರು ಪೇರುಗಳಿಗೆ ಸಾಕ್ಷಿಯಾಗಿತ್ತು. ಪ್ರಬಲ ಸ್ಪರ್ಧಿಗಳನ್ನು ಹಿಂದಿಕ್ಕಿ ಮುಂದೆ ಹೋದ ಐವರಲ್ಲಿ, ಕಾರ್ತಿಕ್ ವಿಜಯಶಾಲಿಯಾದರೆ, ಡ್ರೋನ್ ಪ್ರತಾಪ್ ಫಸ್ಟ್ ರ‌ನ್ನರ್ ಅಪ್ ಆದ್ರು. ಡ್ರೋನ್ ಪ್ರತಾಪ್ ಅವರಿಗಿರುವಷ್ಟು ಫ್ಯಾನ್ ಫೊಲೋವರ್ಸ್ ಬೇರೊಬ್ಬರಿಗಿಲ್ಲ.

ಬಿಗ್ ಬಾಸ್ ಸೀಸನ್ 10 ರಲ್ಲಿ ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಆ ಯುವಕ ಇದೀಗ ವೈರಲ್ ಆಗಿದ್ದಾನೆ.

ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್ ಆಬಿದ್ ಎಂಬಾತ ಈ ಸಲದ ಬಿಗ್ ಬಾಸ್ ಸೀಸನ್ ನಲ್ಲಿ ಡ್ರೋಣ್ ಪ್ರತಾಪ್ ವಿನ್ನರ್ ಆಗಿ ಹೊರಬರಲಿದ್ದು, ಪ್ರತಾಪ್ ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿದ್ದ.

ಅಲ್ಲದೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೊಂದು ವೀಡಿಯೋ ಹರಿಯಬಿಟ್ಟಿದ್ದ. ಇದೀಗ ಕಾರ್ತಿಕ್ ವಿನ್ನರ್ ಆಗಿ ಹೊರ ಬಂದಿದ್ದು, ಪ್ರತಾಪ್ ರನ್ನರ್ ಅಪ್ ಗೆ ಸಮಾಧಾನ ಪಟ್ಟುಕೊಂಡಿದ್ದಾರೆ. ಫಲಿತಾಂಶ ಹೊರ ಬರುತ್ತಲೇ ಆಬಿದ್ ಅರ್ಧ ಗಡ್ಡ ಮೀಸೆ ಬೋಳಿಸಿಕೊಂಡು ಹಸಿ ಮೆಣಸಿನಕಾಯಿ ತಿಂದು ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾನೆ. ಇದೀಗ ವೀಡಿಯೋ ವೈರಲ್ ಆಗಿದೆ.

Related Articles

Latest Articles