ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಟ್ವಿಸ್ಟ್‌ಗಳಿಗೆ ಸಾಕ್ಷಿಯಾಗಿದೆ. ಈ ಹಿಂದೆಯೂ ಹಲವು ಟ್ವಿಸ್ಟ್ ಸಿಕ್ಕಿದೂ ಕೊನೇ ವಾರದಲ್ಲೂ ಬಿಗ್ ಮೂವ್ ಮನೆಮಂದಿಯನ್ನು ಅಚ್ಚರಿಗೊಳಿಸಿದೆ. ಡ್ರೋನ್ ಪ್ರತಾಪ್ ಅವರು ಎಲಿಮಿನೇಟ್ ಆದರೂ ಕೂಡ ಮನೆಯಿಂದ ಹೊರಗೆ ಬಿದ್ದಿಲ್ಲ. ಈ ಅಚ್ಚರಿಗೆ ಕಿಚ್ಚ ಸುದೀಪ ಅವರೇ ಕಾರಣ. ಫಿನಾಲೆ ವಾರದಲ್ಲಿ ವರ್ತೂರು ಸಂತೋಷ್, ತುಕಾಲಿ ಸಂತೋಷ್, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ವಿನಯ್ ಗೌಡ ಹಾಗೂ ಡ್ರೋನ್ ಪ್ರತಾಪ್ ಇದ್ದಾರೆ. ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಡ್ರೋನ್ ಪ್ರತಾಪ್ ಆಟ ಅಂತ್ಯವಾಗಬೇಕಿತ್ತು. ಆದರೆ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದ್ದಾರೆ.
ಮೊದಲ ಬಾರಿಗೆ ಮನೆಯ ಸದಸ್ಯರ ವೋಟ್ನ ಆಧಾರದಲ್ಲಿ ನಿಮ್ಮ ಪೈಕಿ ಒಬ್ಬರು ಹೊರಗೆ ಹೋಗಲಿದ್ದಾರೆ. ಫಿನಾಲೆಗೆ ಕಾಲಿಡಲು ಅರ್ಹತೆ ಇಲ್ಲದ ಒಬ್ಬ ಸದಸ್ಯನ ಹೆಸರನ್ನು ಸೂಕ್ತ ಕಾರಣ ನೀಡಿ ಸೂಚಿಸಿ’ ಎಂದು ಬಿಗ್ ಬಾಸ್ ಕಡೆಯಿಂದ ಆದೇಶ ಬಂತು. ತುಕಾಲಿ ಸಂತೋಷ್, ಕಾರ್ತಿಕ್ ಮಹೇಶ್, ವಿನಯ್ ಗೌಡ ಅವರು ಡ್ರೋನ್ ಪ್ರತಾಪ್ ಹೆಸರನ್ನು ಸೂಚಿಸಿದರು.
ಜನರ ಪ್ರೀತಿ ಸಿಕ್ಕಿದೆ ಎಂದು ಭಾವಿಸಿದ್ದೇನೆ. ನನ್ನ ವರ್ತನೆಗಳನ್ನು ಬಿಗ್ ಬಾಸ್ ತಂಡ ಸಹಿಸಿಕೊಂಡಿದೆ. ಅದಕ್ಕೆ ನಾನು ಋಣಿ. ಅಪ್ಪ-ಅವ್ವ, ಪುಟ್ಟಿಗೆ ನನ್ನ ಆಟ ಖುಷಿ ನೀಡಿದೆ ಎಂದುಕೊಳ್ಳುತ್ತೇನೆ. ಸುದೀಪ್ ಸರ್ಗೆ ಧನ್ಯವಾದ. ಅಭಿಮಾನ ತೋರಿಸಿದ ಜನತೆಗೆ ಧನ್ಯವಾದ’ ಎಂದು ಹೇಳುವ ಮೂಲಕ ಡ್ರೋನ್ ಪ್ರತಾಪ್ ಎಮೋಷನಲ್ ಆದರು. ಇನ್ನುಳಿದ ಸದಸ್ಯರಿಗೆ ಅವರು ‘ಆಲ್ ದಿ ಬೆಸ್ಟ್’ ತಿಳಿಸಿದರು. ಬಳಿಕ ಅವರು ಮುಖ್ಯದ್ವಾರಕ್ಕೆ ಬಂದರು. ಅಲ್ಲಿ ಅವರಿಗೆ ಸರ್ಪ್ರೈಸ್ ಕಾದಿತ್ತು.
ಡ್ರೋನ್ ಪ್ರತಾಪ್ ಅವರು ಮುಖ್ಯದ್ವಾರದ ಬಳಿ ಬಂದರೂ ಕೂಡ ಬಾಗಿಲು ತೆರೆಯಲಿಲ್ಲ. ಅಲ್ಲಿ ಪ್ರತಾಪ್ಗಾಗಿ ಒಂದು ಲಕೋಟೆ ಇಡಲಾಗಿತ್ತು. ಅದನ್ನು ತೆರೆದು ಓದುವಂತೆ ಸೂಚಿಸಲಾಯಿತು. ‘ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರುವುದಿಲ್ಲ’ ಎಂದು ಅದರಲ್ಲಿ ಬರೆದಿತ್ತು. ಆ ಸಂದೇಶ ಓದಿ ಡ್ರೋನ್ ಪ್ರತಾಪ್ ಸಖತ್ ಖುಷಿಪಟ್ಟರು. ಮಿಡ್ ವೀಕ್ ಎಲಿಮಿನೇಷನ್ ಇರುವುದಿಲ್ಲ ಎಂಬುದು ಸುದೀಪ್ ಅವರ ನಿರ್ಧಾರ. ‘ಈ ಸೀಸನ್ನಲ್ಲಿ ಟಾಪ್ 5 ಬದಲಿಗೆ, ಟಾಪ್ 6 ಸದಸ್ಯರು ಫಿನಾಲೆಗೆ ತಲುಪುತ್ತಾರೆ. ಇದು ಸುದೀಪ್ ಅವರ ಉಡುಗೊರೆ’ ಎಂದು ಬಿಗ್ ಬಾಸ್ ಘೋಷಿಸಿದರು.