Friday, June 27, 2025

ರಾತ್ರಿಹೊತ್ತು ಲಾಂಗ್ ಹಿಡಿದು ವೀಲಿಂಗ್ ಮಾಡಿದ್ರೆ ಹುಷಾರ್..! ಆಟಕ್ಕೆ ಬ್ರೇಕ್ – ಬೀಳುತ್ತೆ ರೌಡಿ ಶೀಟ್

ಸಿಲಿಕಾನ್​ ಸಿಟಿಗೆ ಕತ್ತಲು ಆವರಿಸುತ್ತಿದ್ದಂತೆ ವ್ಹೀಲಿಂಗ್​ ಸೌಂಡ್​​ ಜೋರಾಗುತ್ತದೆ. ಪುಂಡ ಪೋಕಿರಿಗಳು, ವ್ಹೀಲಿಂಗ್​ ಮಾಡುತ್ತಾ, ಕೈಯಲ್ಲಿ ಮಾರಕಾಯುಧ ಹಿಡಿದು ಸವಾರರ ಎದೆ ಬಡಿತ ಹೆಚ್ಚು ಮಾಡುತ್ತಾ ಜೀವದ ಜೊತೆ ಚೆಲ್ಲಾಟ ಆಡುವುದು ಪದೇ‌ಪದೇ ವರದಿಯಾಗ್ತಿದೆ. ಇಷ್ಟು ದಿನ ಪುಂಡರ ಸ್ಪೀಡ್​​ಗೆ ಬ್ರೇಕ್​ ಹಾಕಲು ನಗರ ಪೊಲೀಸರು ಆರ್ಮ್ಸ್​ ಆಕ್ಟ್ ಅಡಿ ಕೇಸ್​ ದಾಖಲಿಸಿ ಜೈಲಿಗೆ ಕಳುಹಿಸ್ತಿದ್ರು. ಆದ್ರೆ ಇನ್ಮುಂದೆ ಹಾಗಿರಲ್ಲ ಅದಕ್ಕೂ ಮೇಲೆ.

ಲಾಂಗ್ ಹಿಡಿದು ವೀಲಿಂಗ್ ಮಾಡೋ ಯುವಕರಿಗೆ ಬಿಸಿ‌ ಮುಟ್ಟಿಸೋದಕ್ಕೆ ಪೊಲೀಸರು ಸಜ್ಜಾಗಿದ್ದಾರೆ.‌ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ನಗರ ಪೊಲೀಸರು ವ್ಹೀಲಿಂಗ್​ ಬ್ರೇಕ್​ಗೆ ರೌಡಿ ಶೀಟ್ ಓಪನ್ ಮಾಡೋಕೆ ನಿರ್ಧರಿಸಿದ್ದಾರೆ. ಶಸ್ತ್ರಾಸ್ತ್ರ ಹಿಡಿದು ವ್ಹೀಲಿಂಗ್ ಮಾಡಿದ್ರೆ ಮೊದಲ ಕೇಸ್‌ನಲ್ಲೇ ರೌಡಿ ಶೀಟ್ ಓಪನ್ ಆಗುತ್ತೆ.

ಈ ರೌಡಿ ಶೀಟ್ ಒಮ್ಮೆ ಓಪನ್ ಆಯ್ತು ಅಂದ್ರೆ ಅಷ್ಟೇ. ಪೊಲೀಸರು ಠಾಣೆಗೆ ಕರೆದಾಗೆಲ್ಲಾ ಹಾಜರಾಗಬೇಕು. ಪ್ರತಿ ಸಲವೂ ನಡೆಯೋ ರೌಡಿ ಪರೇಡ್​ನಲ್ಲಿ​ ಭಾಗಿಯಾಗಬೇಕು.

ಒಮ್ಮೆ ಓಪನ್ ಆದ ರೌಡಿಶೀಟ್ ಕನಿಷ್ಠ 10 ವರ್ಷಗಳ ಕಾಲ ಇರುತ್ತೆ. ಚುನಾವಣೆ, ಹಬ್ಬ ಹರಿದಿನಗಳಲ್ಲಿ ಮುಂಜಾಗ್ರತಾ ಕ್ರಮವಾಗಿ, ಯಾವುದೇ ಅಪರಾಧಗಳಲ್ಲಿ ಭಾಗಿಯಾಗಲ್ಲ ಅಂತ ಬಾಂಡ್ ಬರೆದು ಕೊಡಬೇಕು. ಒಮ್ಮೆ ಬರೆದು ಕೊಟ್ಟ ಬಾಂಡ್ ಆರು ತಿಂಗಳ ಕಾಲ ಚಾಲ್ತಿಯಲ್ಲಿರುತ್ತೆ.

Related Articles

Latest Articles