ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಡೆಲಿವರಿ ಬಾಯ್ ಮನೆ ಮುಂದೆ ಇಟ್ಟಿದ್ದ ದುಬಾರಿ ಬೆಲೆಯ ಶೂಗಳನ್ನು ಕದ್ದು ಎಸ್ಕೇಪ್ ಆಗಿರುವ ಘಟನೆ ಏಪ್ರಿಲ್ 9 ರಂದು ಚಂಢಿಗಡದ ಗುರುಗ್ರಾಮ್‌ನ ಫ್ಲಾಟ್ವೊಂದರಲ್ಲಿ ನಡೆದಿದೆ.
ಹೌದು, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಡೆಲಿವರಿ ಬಾಯ್ ಮನೆ ಮುಂದೆ ಇಟ್ಟಿದ್ದ ಶೂಗಳನ್ನು ಕದ್ದು ತೆಗದುಕೊಂಡು ಹೋಗುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ರೋಹಿತ್ ಅರೋರಾ ಎಂಬುವವರು ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಸ್ವಿಗ್ಗಿ ಡ್ರಾಪ್ ಮತ್ತು ಪಿಕ್ ಅಪ್ ಸೇವೆಯ ಒಬ್ಬ ವಿತರಣಾ ಹುಡುಗ ನನ್ನ ಸ್ನೇಹಿತನ ಶೂಗಳನ್ನು ತೆಗೆದುಕೊಂಡನು ಹೋಗಿದ್ದಾನೆ ಎಂದು ಬರೆದುಕೊಂಡಿದ್ದಾರೆ.
ವೀಡಿಯೊದಲ್ಲಿ ಡೆಲಿವರಿ ಬಾಯ್ ಮನೆಯ ಬಾಗಿಲ ಬಳಿ ಬರುತ್ತಾನೆ. ನಂತರ ಫ್ಲಾಟ್‌ನ ಡೋರ್‌ಬೆಲ್ ಅನ್ನು ರಿಂಗ್ ಮಾಡುತ್ತಾರೆ. ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಸುತ್ತಲೂ ನೋಡುತ್ತಿರುವುದು ಕಂಡು ಬರುತ್ತದೆ. ಪಾರ್ಸೆಲ್ ತಲುಪಿಸಿದ ನಂತರ ಅವನು ತನ್ನ ಮುಖವನ್ನು ಟವೆಲ್‌ನಿಂದ ಒರೆಸುತ್ತಾ ಮೆಟ್ಟಿಲುಗಳ ಕೆಳಗೆ ಹೋಗುತ್ತಾನೆ. ಬಳಿಕ ಸ್ವಲ್ಪ ಸಮಯದ ನಂತರ ಫ್ಲಾಟ್‌ನ ಹೊರಗೆ ಇರಿಸಲಾದ ದುಬಾರಿ ಬೆಲೆಯ ಶೂಗಳನ್ನು ಕದ್ದುಕೊಂಡು ಹೋಗುತ್ತಾನೆ.
ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವಿಗ್ಗಿಯ ಕಸ್ಟಮರ್ ಕೇರ್ಗೆ ರೋಹಿತ್ ಅವರ ದೂರಿಗೆ ಕೂಡಲೇ ಪ್ರತಿಕ್ರಿಯೆ ನೀಡಿದೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ.