Friday, March 21, 2025

ವೈದ್ಯೋ ನಾರಾಯಣೋ ಹರಿ: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿಯೇ ಹೆರಿಗೆ..! ತಾಯಿ – ಮಗು ಇಬ್ಬರು ಸುರಕ್ಷಿತ..! ಆಸ್ಪತ್ರೆಯ ಹೆಸರೇ ಮಗುವಿಗೆ ನಾಮಕರಣ

ಚಲಿಸುತ್ತಿರುವ ಬಸ್ಸಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆ ಚಾಲಕನ ಸಮಯ ಪ್ರಜ್ಞೆ ಹಾಗೂ ವೈದ್ಯರ ತಂಡ ತೋರಿದ ಅಪೂರ್ವ ಕರ್ತವ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಆಸ್ಪತ್ರೆಯತ್ತ ಧಾವಿಸಿದ್ದಾನೆ. ಆಸ್ಪತ್ರೆಯ ಆವರಣದಲ್ಲಿಯೇ ಬಸ್ಸು ನಿಲ್ಲಿಸಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ವೈದ್ಯರ ತಂಡ ಬಸ್ಸಿನಲ್ಲೇ ಹೆರಿಗೆ ಮಾಡಿಸಿದ್ದಾರೆ. ತಾಯಿ ಮಗು ಆರೋಗ್ಯವಾಗಿದೆ.

ಘಟನೆ ನಡೆದಿರುವುದು ಎಲ್ಲಿ?
ತ್ರಿಶೂರ್‌ನ ಅಮಲಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಈ ಘಟನೆ ನಡೆದಿದೆ. ವರದಿ ಪ್ರಕಾರ ಮೇ 29 ರಂದು ನಡೆದಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಅಳವಡಿಸಿದ ಸಿಸಿ ಕ್ಯಾಮಾರಾದ ವಿಡಿಯೋಗಳು ವೈರಲ್ ಆಗುತ್ತಿದೆ. ಬಸ್ಸು ಪಾರ್ಕ್ ಮಾಡಿದ ಕೂಡಲೇ ಇಬ್ಬರು ಭದ್ರತಾ ಸಿಬ್ಬಂದಿ ಸ್ಟ್ರೆಚರ್ ಅನ್ನು ಬಸ್‌ನ ಬಾಗಿಲಿಗೆ ತಳ್ಳಿದ್ದಾರೆ. ಸ್ಟ್ರೆಚರ್ ಅನ್ನು ಸರಿಸಲು ಸಹಾಯ ಮಾಡಲು ಒಂದೆರಡು ಜನರು ಬಸ್‌ನಿಂದ ಜಿಗಿಯುತ್ತಿರುವುದು ಕಂಡುಬರುತ್ತದೆ.

ಸಿಬ್ಬಂದಿಯೊಬ್ಬರು ಬಸ್‌ನೊಳಗೆ ಪ್ರವೇಶಿಸಿ ನಂತರ ಆಸ್ಪತ್ರೆಯ ಸಿಬ್ಬಂದಿಯನ್ನು ಬಸ್‌ನೊಳಗೆ ಪ್ರವೇಶಿಸಲು ಹೇಳುತ್ತಾರೆ. ನಂತರ ವೈದ್ಯರ ತಂಡ ವೈದ್ಯಕೀಯ ಉಪಕರಣಗಳನ್ನು ಬಸ್ಸಿಗೆ ಸಾಗಿಸಿ ಅಲ್ಲಿಯೇ ಹೆರಿಗೆ ಮಾಡಿಸುತ್ತಾರೆ. ನಂತರ ಮಹಿಳೆ ಮತ್ತು ಹೆಣ್ಣು ಮಗುವನ್ನು ಆಸ್ಪತ್ರೆಯೊಳಗೆ ಕರೆದುಕೊಂಡು ಹೋಗುತ್ತಾರೆ.

37 ವರ್ಷದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಮಲಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ ತೋರಿದ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜನಮ್ ಟಿವಿ ವರದಿ ಪ್ರಕಾರ ಹೆಣ್ಣುಮಗುವಿಗೆ ಅಮಲಾ ಎಂದು ನಾಮಕರಣ ಮಾಡಿದ್ದಾಗಿ ವರದಿ ಪ್ರಕಟಿಸಿದೆ. ತನ್ನ ಹಾಗೂ ಮಗುವಿನ ಪ್ರಾಣ ಉಳಿಸಿದಕ್ಕಾಗಿ ಅಮಲಾ ಆಸ್ಪತ್ರೆಯ ಹೆಸರನ್ನೇ ಇಟ್ಟದ್ದಾಗಿ ತಿಳಿಸಿದ್ದಾರೆ.

Related Articles

Latest Articles