ದೆಹಲಿಯಲ್ಲಿ ಕೋಳಿ ಮೊಟ್ಟೆಗಳ ಮೇಲೆ ಆಕರ್ಷಕ ಆಫರ್‌ಗಳನ್ನು ಪಡೆಯುವ ಭರದಲ್ಲಿ 62 ವರ್ಷದ ವೃದ್ಧ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ವಾಸ್ತವವಾಗಿ ಅವರು ಕೇವಲ 49 ರೂಪಾಯಿಗೆ ಕೋಳಿ ಅಥವಾ ಮೊಟ್ಟೆ ಎರಡರಲ್ಲಿ ಒಂದನ್ನು ತೆಗೆದುಕೊಳ್ಳುವ ಆಫರ್ ನೋಡಿದರು. ಅದರಲ್ಲಿ 98 ರೂಪಾಯಿಗೆ ಎರಡನ್ನೂ ತೆಗೆದುಕೊಳ್ಳಬಹುದು ಎಂಬುದನ್ನೂ ಕಂಡುಕೊಂಡಿದ್ದಾರೆ.ಕಡೆಗೆ ಆರ್ಡರ್ ಮಾಡುವ ಭರದಲ್ಲಿ 50 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾಗಿ ದೂರು ನೀಡಿದ್ದಾರೆ.
ನ.19 ರಂದು ಬೆಳಗ್ಗೆ ಕೋಳಿ ಮತ್ತು ಮೊಟ್ಟೆಗಳನ್ನು ಖರೀದಿಸಲು ವೆಬ್‌ಸೈಟ್ ಒಂದರಲ್ಲಿ ಆಕರ್ಷಕ ಕೊಡುಗೆ ವೀಕ್ಷಿಸಿದರು. ಕೇವಲ 49 ರೂಪಾಯಿಗೆ ಉತ್ತಮ ಪ್ರಮಾಣದ ಕೋಳಿ ಅಥವಾ ಮೊಟ್ಟೆ ಲಭ್ಯವಿತ್ತು. ಈ ವೇಳೆ ಅವರು ಎರಡನ್ನೂ ಖರೀದಿಸಲು ಬಯಸಿ ಕ್ರೆಡಿಟ್ ಕಾರ್ಡ್‌ನಿಂದ 98 ರೂ.ಪಾವತಿಸಲು ಯತ್ನಿಸಿದರು. ಕೂಡಲೇ ಅತ್ತಕಡೆಯಿಂದ ಅವರ ಮೊಬೈಲ್ಗೆ ಒಟಿಪಿ ಬಂದಿದೆ.
ಅ ವೃದ್ಧ ಕ್ಷಣಾರ್ಧದಲ್ಲೇ ಕೋಳಿ ಮತ್ತು ಮೊಟ್ಟೆ ಖರೀದಿಗೆ ಯತ್ನಿಸಿದ ವೆಬ್‌ಸೈಟ್ ಕಡೆಯ ವ್ಯಕ್ತಿಗೆ ಒಟಿಪಿ ರವಾನಿಸಿದ್ದಾರೆ. ಆಗ 98ರ ಬದಲಾಗಿ 52,792 ರೂ. ತನ್ನ ಬ್ಯಾಂಕ್ ಖಾತೆಯಿಂದ ಕಡಿತವಾಗಿರುವುದನ್ನು ಕಂಡು ವೃದ್ಧ ಹೌಹಾರಿದ್ದಾರೆ. ವೃದ್ಧನಿಗ ನಿಜದ ಅರಿವಾಗಿ ಬ್ಯಾಂಕ್ ಹಾಗೂ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.