ಮದುವೆಯಾಗಿ ಮೂರೂ ತಿಂಗಳಿಗೆ ಪತಿ ಪತ್ನಿ ಇಹಲೋಕ ತ್ಯಜಿಸಿದ ಆಘಾತಕಾರಿ ಘಟನೆಯೊಂದು ದೆಹಲಿಯ ಗಾಜಿಯಾಬಾದ್‌ನಲ್ಲಿ ಸಂಭವಿಸಿದೆ.
ಮದುವೆಯಾಗಿ ಮೂರೇ ತಿಂಗಳಿಗೆ ಪತಿ ಹೃದಯಾಘಾತಗೊಂಡು ಮೃತಪಟ್ಟರೆ ಪತಿಯ ಸಾವಿನ ಸುದ್ದಿ ಕೇಳಿದ ಪತ್ನಿ ಆಘಾತಗೊಂಡು ವಾಸವಿದ್ದ ಏಳು ಅಂತಸ್ಥಿನ ಕಟ್ಟಡದಿಂದ ಜಿಗಿದು ಜೀವ ಕಳೆದುಕೊಂಡಿದ್ದಾಳೆ.
ಅಭಿಷೇಕ್ ಅಹ್ಲುವಾಲಿಯಾ ಜೊತೆ ಅಂಜಲಿ ಕಳೆದ ವರ್ಷ ನವೆಂಬರ್ ನಲ್ಲಿ ಮದುವೆಯಾಗಿದ್ದರು. ದಿನದ ಹಿಂದಷ್ಟೇ ದೆಹಲಿಯಲ್ಲಿರುವ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಇದ್ದಕಿದ್ದಂತೆ ಅಭಿಷೇಕ್ ಗೆ ಹೃದಯಾಘತವಾಗಿದೆ.
ಕೂಡಲೇ ಅಲ್ಲಿದ್ದ ಜನರು ಸೇರಿ ಅಭಿಷೇಕ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಗಾಬರಿಯಾದ ಪತ್ನಿ ಅಂಜಲಿ ತನ್ನ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೆ ಪತಿಗೆ ಹೃದಯಾಘಾತವಾದ ವಿಚಾರವನ್ನು ತಿಳಿಸಿದ್ದಾಳೆ.
ಗಂಭೀರ ಸ್ಥಿತಿಯಲ್ಲಿದ್ದ ಅಭಿಷೇಕ್ ಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸಂಜೆ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಅಭಿಷೇಕ್ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಕುಟುಂಬ ಸದಸ್ಯರು ಅಭಿಷೇಕ್ ಮೃತದೇಹವನ್ನು ಗಾಜಿಯಾಬಾದ್ ನಲ್ಲಿರುವ ಫ್ಲಾಟ್ ಗೆ ತಂದಿದ್ದಾರೆ. ಈ ವೇಳೆ ಮೃತ ಅಭಿಷೇಕ್ ಜೊತೆಗೆ ಇದ್ದ ಅಂಜಲಿ ಇದ್ದಕಿದ್ದಂತೆ ಎದ್ದು ಕಟ್ಟಡದ ಏಳನೇ ಮಹಡಿಯಿಂದ ಜಿಗಿದಿದ್ದಾಳೆ. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ.