ಪ್ಯಾರಿಸ್ ಪ್ಯಾರಾ ಒಲಿಂಪಿಕ್‌ನ ಆರನೇ ದಿನದಂದು ಭಾರತಕ್ಕೆ ಕಂಚಿನ ಪದಕ ಲಭಿಸಿದೆ. ವನಿತೆಯರ 400 meter T20 ವಿಭಾಗದಲ್ಲಿ ಭಾರತೀಯ ಅಥ್ಲೀಟ್ ಅಮೋಘ ಸಾಧನೆ ಮಾಡಿ ಕಂಚಿನ ಪದಕ್ಕೆ ಕೊರಳೊಡ್ಡಿದ್ದಾರೆ. ಆ ಮೂಲಕ ಮಂಗಳವಾರದಂದು ಕಂಚು ಗೆದ್ದ ಸಂಭ್ರಮಿಸಿದ್ದಾರೆ ದೀಪ್ತಿ ಜೀವಂಜಿ (Deepthi Jeevanji).
ದೀಪ್ತಿ ಜೀವಂಜಿ ತೆಲಂಗಾಣ ಮೂಲದವರಾಗಿದ್ದು ಈ ಹಿಂದಿನ ಸುತ್ತಿನ ಪಂದ್ಯಾಟದಲ್ಲಿ 55.45 ಸೆಕೆಂಟುಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದರು. ಪದಕ ಪಂದ್ಯಾಟದಲ್ಲಿ ಮೂರನೇ ಸ್ಥಾನಿಯಾಗಿ ಹೊರಹೊಮ್ಮಿದರು.
ಫೈನಲ್‌ನಲ್ಲಿ ೫೫.೮೨ ಸೆಕೆಂಟುಗಳಲ್ಲಿ ಓಡಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಸದ್ಯ ಭಾರತದ ತೆಕ್ಕೆಯಲ್ಲಿ ಹದಿನಾರು ಪದಕಗಳಿವೆ. ಮೂರು ಚಿನ್ನ, ಐದು ಬೆಳ್ಳಿ, ಎಂಟು ಕಂಚಿನ ಪದಕ ಗೆದ್ದಿದ್ದಾರೆ.