Sunday, April 20, 2025

ಹೀಗೆ ಮಳೆಯಲ್ಲಿ ಓಡಾಡಿದ್ರೆ ರಜೆ ಕೊಡಲ್ಲ ಅಂದ ಜಿಲ್ಲಾಧಿಕಾರಿ; ನಾಳೆ ರಜೆ ಕೊಟ್ಟರೆ ಮನೆಯಲ್ಲಿಯೇ ನಿಲ್ಲುತ್ತೇವೆ ಅಂದ್ರು ಮಕ್ಕಳು

ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜು. 19 ಮಧ್ಯಾಹ್ನದ ವೇಳೆಗೆ ಬಂಟ್ವಾಳದ ನೆರೆ ಪೀಡಿತ ಪ್ರದೇಶಗಳಾದ ಪಾಣೆಮಂಗಳೂರು ಆಲಡ್ಕಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಆಡಳಿತ ಹಾಗೂ ಪೋಲೀಸರ ಜೊತೆಗೆ ಕೆಲ ಹೊತ್ತು ಇಲ್ಲಿನ ಸ್ಥಿತಿಗತಿಗಳ ಬಗ್ಗೆ ‌ಮಾಹಿತಿ ಪಡೆದುಕೊಂಡರು.

ನೀರು ಜಾಸ್ತಿಯಾಗಿ ಮನೆಗಳಿಗೆ ‌ನೀರು‌ನುಗ್ಗುವ ಲಕ್ಷಣಗಳು ಕಂಡು ಬರುವ ಮನೆಗಳನ್ನು ಹಗಲು ಹೊತ್ತಿನಲ್ಲಿಯೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ‌ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಾಳಜಿ‌ಕೇಂದ್ರದ ಬಗ್ಗೆ ಮಾಹಿತಿ ‌ಪಡೆದುಕೊಂಡ ಅವರು ಅಲ್ಲಿನ ವ್ಯವಸ್ಥೆಗಳನ್ನು ತಿಳಿದುಕೊಂಡರು.

ಪಾಣೆಮಂಗಳೂರು ಆಲಡ್ಕ ಪ್ರದೇಶಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಶಾಲೆಗೆ ರಜೆ ನೀಡುವ ಮಕ್ಕಳಿಗೆ ಅಚ್ಚುಮೆಚ್ಚಿನ ಜಿಲ್ಲಾಧಿಕಾರಿಯವರನ್ನು ನೋಡಲು ಸ್ಥಳೀಯ ಅನೇಕ ಮಕ್ಕಳು ಅಲ್ಲಿ ನೆರೆದಿದ್ದರು. ಎಲ್ಲಾ ಮಕ್ಕಳ ಕೈ ಕುಳಿಕದ ಜಿಲ್ಲಾಧಿಕಾರಿ ಅವರು ರಜೆ ನೀಡಿರುವುದು ಮನೆಯಲ್ಲಿ ಸುರಕ್ಷಿತವಾಗಿ ಕುಳಿತುಕೊಳ್ಳುವ ಉದ್ದೇಶದಿಂದ. ಹೀಗೆ ಮಾಡಿದರೆ ರಜೆ ಕೊಡಲ್ಲ ಎಂದಿದ್ದಾರೆ‌. ಈ ವೇಳೆ ಮಕ್ಕಳು ನಾಳೆ ರಜೆ ಕೊಡಿ, ಮನೆಯಲ್ಲಿ ಕುಳಿತುಕೊಳ್ಳುತ್ತೇವೆ ಎಂದಿದ್ದಾರೆ‌. ನೀವು ನೀರಿನ ಹತ್ತಿರಕ್ಕೆ ನದಿ ತೀರಕ್ಕೆ ತೆರಳದೆ ಮನೆಯಲ್ಲಿ ಜಾಗೃತೆವಹಿಸಿ ಎಂದು ಬುದ್ದಿ ಮಾತು ಹೇಳಿದ್ದಾರೆ. ಈ ಸಂಭಾಷಣೆ ನಗು ತರಿಸುವಂತಿದೆ‌. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ‌‌.

Related Articles

Latest Articles