ದಕ್ಷಿಣ ಕನ್ನಡ: ಇತ್ತೀಚಿಗಿನ ದಿನಗಳಲ್ಲಿ ಯುವಕರು ತಮ್ಮ ಚಟವನ್ನು ತೀರಿಸಿಕೊಳ್ಳಲು ಯಾವ ಹಂತಕ್ಕೂ ತಲುಪುತ್ತಾರೆ. ಪೊದೆ, ಪಾರ್ಕ್, ಬೀಚ್, ಕಾಡು, ನಿರ್ಜನ ಸ್ಥಳಗಳಲ್ಲಿ ಮೈಮರೆತು ಬಿಡುತ್ತಾರೆ. ಜೋಡಿಯೊಂದು ಮಳೆಗಾಲದಲ್ಲಿ ಮೈ ಬಿಸಿ ಮಾಡಿಕೊಳ್ಳೋದಕ್ಕೆ ಹೋಗಿ ಇನ್ನೇನು ಸಾರ್ವಜನಿಕರ ಕೈಗೆ ಸಿಕ್ಕಿ ಬೀಳುತ್ತೆ ಅನ್ನೋವಾಗಲೇ ಎಸ್ಕೇಪ್ ಆದ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ನಡೆದಿದೆ.
ಬೈಕ್ ಸವಾರನೊಬ್ಬ ಅಪ್ರಾಪ್ತೆಯನ್ನು ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಕರೆದುಕೊಂಡು ಬಂದಿದ್ದಾನೆ. ಮೊದಲೇ ಅನಿಸಿದನ್ನು ಮಾಡಬೇಕೆಂದುಕೊ0ಡಿದ್ದ ಜೋಡಿ ಮಿಲನ ಕ್ರಿಯೆ ನಡೆಸಲು ಮುಂದಾಗಿದೆ. ಜೋಡಿ ತಮಗೆ ಬೇಕಾದ ಸಕಲ ವ್ಯವಸ್ಥೆಯನ್ನೂ ಮಾಡಿಕೊಂಡೇ ಬಂದಿದೆ. ಕಾಂಡೋಮ್, ಎಣ್ಣೆ, ಪಿಲ್ಸ್ ಹೀಗೆ ಸುಖ ಅನುಭವಿಸಲು ಯಾವುದೆಲ್ಲಾ ಬೇಕೋ ಅದನ್ನೆಲ್ಲಾ ಹಿಡಿದುಕೊಂಡು ಬಂದು ಏಕಾಂತದಲ್ಲಿ ಮೈಮರೆಯೋದಕ್ಕೆ ಸಿದ್ಧರಾಗಿದ್ದಾರೆ.
- ಲೈಂಗಿಕ ಶಕ್ತಿ ವರ್ಧಕ ಮಾತ್ರೆ ಸೇವಿಸಿ ದೌರ್ಜನ್ಯ – ಕುಸಿದು ಬಿದ್ದು ಡೈಮಂಡ್ ಫ್ಯಾಕ್ಟರಿ ಮ್ಯಾನೇಜರ್ ಮೃತ್ಯು
- ನಾ ಡ್ರೈವರಾ.. ನೀ ನನ್ನ ಲವ್ವರಾ ಹಾಡು ಖ್ಯಾತಿಯ ಮಾಳು ನಿಪನಾಳ್ ಗ್ಯಾಂಗ್ನಿಂದ ಹಲ್ಲೆ – ದೂರು ದಾಖಲು
- ಪಟಾಕಿ ಮೇಲೆ ಕುಳಿತರೆ ರಿಕ್ಷಾ ಗಿಫ್ಟ್ – ಸ್ನೇಹಿತರ ಚಾಲೆಂಜ್ ಹುಚ್ಚಾಟಕ್ಕೆ ಹಾರಿದ ಪ್ರಾಣಪಕ್ಷಿ
- ಲಾರಿಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಕಾಡಿನೊಳಕ್ಕೆ ಹೊಕ್ಕ ಜೋಡಿ ಮಿಲನ ಕ್ರಿಯೆ ಮಾಡೋದಕ್ಕೆ ಮುಂದಾಗಿದೆ. ಈ ವೇಳೆ ಕಾಡಿನೊಳಗೆ ಜೋಡಿ ಹೋಗಿದೆ ಎಂಬ ಸುದ್ದಿ ಸ್ಥಳೀಯರಲ್ಲಿ ಹರಡಿತ್ತು. ಸ್ಥಳೀಯರೆಲ್ಲಾ ಸೇರಿಕೊಂಡು ಹುಡುಕಾಟ ನಡೆಸಿದ್ದಾರೆ. ಜನ ಜಾಲಾಡುತ್ತಿದ್ದ ನಡುವೆಯೇ ಬೈಕ್, ಬಟ್ಟೆ ಬರೆಗಳನ್ನು ಅಲ್ಲೇ ಬಿಟ್ಟು ಅರೆನಗ್ನರಾಗಿದ್ದ ಯುವಕ-ಯುವತಿ ಪರಾರಿಯಾಗಿದ್ದಾರೆ.
ಇನ್ನು ಸ್ಥಳೀಯರು ಎಂಟ್ರಿಯಾಗುತ್ತಿದ್ದಂತೆ ಜೋಡಿ ಎಸ್ಕೇಪ್ ಆಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಿತಾರಣ್ಯದಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ನಶೆಯೇರಿಸುವ ಮಾತ್ರೆಗಳು, ಕಾಂಡೋಮ್ ಪ್ಯಾಕ್, ಚಪ್ಪಲಿ, ಬಾಟಲಿ, ನೆಲಕ್ಕೆ ಹಾಸಿದ ಬಟ್ಟೆ ಇತ್ಯಾದಿ ವಸ್ತುಗಳು ಪತ್ತೆಯಾಗಿದೆ.
ಇದೀಗ ಪೊಲೀಸರು ಯುವತಿ ಮತ್ತು ಯುವಕನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು ಇನ್ನಾದರೂ ರಕ್ಷಿತಾರಣ್ಯ ಪರಿಸರ ಪುಂಡರಿ0ದ ಮುಕ್ತವಾಗಲಿ ಎಂದು ಜನ ಒತ್ತಾಯಿಸಿದ್ದಾರೆ.