ಜಾನುವಾರುಗಳ ಆಕಸ್ಮಿಕ ಮರಣದಿಂದ ರೈತರು ಎದುರಿಸುವ ಆರ್ಥಿಕ ಸಂಕಷ್ಟ ನಿವಾರಣೆಗೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಯಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಎಸ್‌ಸಿಪಿ/ಟಿಎಸ್‌ಪಿ ಉಳಿಕೆಯಾಗಿರುವ ಅನುದಾನದಲ್ಲಿ ವಿಮೆ ಒದಗಿಸಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ರೈತರು ಸ್ಥಳೀಯ ಪಶು ವೈದ್ಯರನ್ನು ಸಂಪರ್ಕಿಸಿ ತಮ್ಮ ಹಸು, ಎಮ್ಮೆ, ಕೋಣ, ಎತ್ತು, ಆಡು, ಮೊಲ, ಹಂದಿಗಳಿಗೆ 1 ವರ್ಷ, 2 ವರ್ಷ ಅಥವಾ 3 ವರ್ಷಗಳ ಅವಧಿಗೆ ಜೀವ ವಿಮೆ ಮಾಡಿಸಬಹುದು.
ವಿಮೆಯ ಪ್ರೀಮಿಯಂ ಮೊತ್ತದಲ್ಲಿ ಶೇ. 70ರಷ್ಟು ಸಹಾಯಧನ ಇಲಾಖೆಯಿಂದ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಗ್ರಾ.ಪಂ. ಮಟ್ಟದಲ್ಲಿರುವ ಪಶು ಸಖೀಯರನ್ನು ಸಂಪರ್ಕಿಸುವಂತೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.