ಸೀಮಾ ಹೈದರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪಬ್ಜೀ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದವರು. ಇದಾದ ಬಳಿಕ ಫೇಸ್ಬುಕ್ ಲವ್ವರ್ ಭೇಟಿಗಾಗಿ ಅಂಜು ಪಾಕಿಸ್ತಾನ ಹೋಗಿ ಮರಳಿ ಬಂದಿದ್ದಳು. ಇದೀಗ ಇಂತಹದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಪಬ್ ಜಿ, ಇನ್ಸ್ಟಾ, ಫೇಸ್ಬುಕ್ ಬಳಿಕ ವಾಟ್ಸಾಪ್ನಲ್ಲಿ ಯುವತಿಗೆ ಲವ್ ಮೂಡಿದೆ. ಹೀಗಾಗಿ ಆ ಯುವಕ ಜೊತೆ ಮದುವೆಯಾಗಲು ಇಬ್ಬರು ಮಕ್ಕಳ ತಾಯಿ ಪಾಕಿಸ್ತಾನಕ್ಕೆ ಹೋದ ಘಟನೆ ಬೆಳಕಿಗೆ ಬಂದಿದೆ. ಹೌದು, ಜಮ್ಮು ಮತ್ತು ಕಾಶ್ಮೀರದ ಮಹಿಳೆಯೊಬ್ಬರು ತಮಗೆ ವಾಟ್ಸಾಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ತನ್ನ ಒಂದೂವರೆ ವರ್ಷದ ಮಗಳ ಸಮೇತ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಪೂಂಛ್ ನಿವಾಸಿಯಾಗಿರುವ 22 ವರ್ಷದ ಮಹಿಳೆ ಶಬ್ನಮ್ ಎಂಬಾಕೆ ಗುಲಾಮ್ ರುಬಾನಿ ಎಂಬುವವರನ್ನು ಮದುವೆಯಾಗಿದ್ದರು. ಆ ಮಹಿಳೆಗೆ ಈಗ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. 4 ವರ್ಷದ ಹಿರಿಯ ಮಗಳನ್ನು ಅಲ್ಲಿಯೇ ಬಿಟ್ಟು ಒಂದೂವರೆ ವರ್ಷದ ಮಗುವನ್ನು ಮಾತ್ರ ಕರೆದುಕೊಂಡು ಹೋಗಿದ್ದಾಳೆ ಶಬ್ನಮ್.
ಇನ್ನೂ, ಈ ಸಂಬಂಧ ಪಾಕಿಸ್ತಾನಕ್ಕೆ ಹೋದ ಮಹಿಳೆ ಪತಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಕೇಸ್ ದಾಖಲಿಸಿಕೊಂಡ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ಮಹಿಳೆಯ ಮೂವರು ಚಿಕ್ಕಪ್ಪಂದಿರು ಮತ್ತು ಚಿಕ್ಕಮ್ಮ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆಕೆ ಪ್ರಿಯಕರನ ಜತೆ ಸಂಪರ್ಕದಲ್ಲಿದ್ದಳು ಎಂದು ತಿಳಿದು ಬಂದಿದೆ.