Sunday, October 13, 2024

ಪೈಲ್ಸ್ ಕಾಯಿಲೆಗೆ ಮನನೊಂದು ಯುವಕ ಜೀವಾಂತ್ಯ

ಚಿತ್ರದುರ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಜಿಲ್ಲೆಯ ಚಳ್ಳಕೆರೆ ನಗರದ ಸೂಜಿಮಲ್ಲೇಶ್ವರ ನಗರದ ರವಿಕುಮಾರ್(30) ಪೈಲ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣಮುಖವಾಗಲಿಲ್ಲ ಎಂಬ ಕಾರಣಕ್ಕೆ‌ ಜೀವಾಂತ್ಯ ಮಾಡಿಕೊಂಡಿದ್ದಾರೆ.

ಆಟೋ ಚಾಲನೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಚಿಕಿತ್ಸೆ ಫಲಿಸದ ಕಾರಣ ಮನನೊಂದು ಪಾವಗಡ ರಸ್ತೆಯ ಸಾಯಿಬಾಬ ಮಂದಿರದ ಸಮೀಪದ ಜಮೀನೊಂದರಲ್ಲಿ ಮರಕ್ಕೆ ನೇಣಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಪಿಎಸ್‌ಐ ಧೆರೆಪ್ಪ ಭೇಟಿ ನೀಡಿ ಪರಿಶೀನೆ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Related Articles

Latest Articles