Tuesday, March 18, 2025

ಇನ್ನೇನು ತಾಳಿ ಕಟ್ಟಬೇಕು ಎನ್ನುಷ್ಟರಲ್ಲೇ ಮದುವೆ ನಿರಾಕರಿಸಿದ ವಧು – ವಿಡಿಯೋ ವೈರಲ್

ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಂಟಪದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರೂ, ಆದ್ರೆ, ಕೊನೆಗಳಿಗೆಯಲ್ಲಿ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಾಳೆ. ಇದರಿಂದ ಮದುವೆ ರದ್ದಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ಕೈ ಅಡ್ಡ ಹಿಡಿದು ತಡೆದಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

ಮಂಜುನಾಥ್ ಮತ್ತು ಐಶ್ವರ್ಯ ನಡುವೆ ವಿವಾಹ ನಿಶ್ಚಿಯವಾಗಿತ್ತು. ಅದರಂತೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಇನ್ನೇನು ವರ ತಾಳಿ ಕಟ್ಟಿದರೆ ಮದುವೆಯೇ ಮುಗಿದು ಹೋಗಿದೆ.‌

ಮಂಜುನಾಥ್ ತಾಳಿ ಕಟ್ಟಲು ಎದ್ದು ನಿಂತರೇ ಬೇಡ ಎಂದು ಕೈ ಅಡ್ಡ ಹಿಡಿದಿದ್ದಾಳೆ. ಈ ವೇಳೆ ಸಂಬಂಧಿಕರು ಐಶ್ವರ್ಯಳನ್ನು ಮನವೊಲಿಸಿದ್ದಾರೆ. ಎಷ್ಟೇ ಹರಸಾಹಸ ಪಟ್ಟರೂ ಸಹ ಬಗ್ಗದ ಐಶ್ವರ್ಯ ತಾಳಿ ಕಟ್ಟಿಸಿಕೊಳ್ಳಲು ಒಪ್ಪಲೇ ಇಲ್ಲ. ಯುವತಿ ನಡೆಗೆ ಯುವಕನ ಸಂಬಂಧಿಕರ ಆಕ್ರೋಶ ವ್ಯಕ್ತಿಪಡಿಸಿದ್ದಾರೆ. ಈ ವೇಳೆ ಯುವತಿ ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ಉಂಟಾಗಿ ಕೊನೆಗೆ ಅಂತಿಮವಾಗಿ ಈ ಮದುವೆಯೇ ರದ್ದುಗೊಂಡಿದೆ.

Related Articles

Latest Articles