ಚಿಕ್ಕಮಗಳೂರಿನ ಕ್ರಿಶ್ಚಿಯನ್ ಕಾಲೋನಿಯಲ್ಲಿ ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ. ಪತ್ನಿ ಶಮಭಾನು(34) ಕೊಲೆಯಾದವರು. ಇನ್ನು ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಆರೋಪಿ ಪತಿಯನ್ನು ಶಬ್ಬೀರ್ ಅಹ್ಮದ್ ಎನ್ನಲಾಗಿದೆ. ಈತ ದೊಣ್ಣೆಯಿಂದ ಹೊಡೆದು ಪತ್ನಿ ಶಮಭಾನು(34) ಎಂಬುವವರನ್ನು ಕೊಲೆ ಮಾಡಿದ್ದಾನೆ. ಕಳೆದ ಒಂದು ವರ್ಷದ ಹಿಂದೆ ಶಮಭಾನು ಅವರನ್ನು ಶಬ್ಬೀರ್ ಮದ್ವೆಯಾಗಿದ್ದರು.