Wednesday, February 19, 2025

ಬೈಕ್​ಗೆ ಡಿಕ್ಕಿ ಹೊಡೆದ ಲಾರಿ; 3 ವರ್ಷದ ಮಗು ದಾರುಣ ಸಾವು

ಚಿಕ್ಕಬಳ್ಳಾಪುರ: ಬೈಕ್​ ಮೇಲೆ ಲಾರಿಯ ಚಕ್ರ ಹರಿದು ಮೂರು ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೆಸ್ತೂರು ಗೇಟ್ ಬಳಿ ನಡೆದಿದೆ. ಧನ್ವಿತ್ (03) ಸ್ಥಳದಲ್ಲೇ ಮೃತಪಟ್ಟ ಮಗು.

ದೊಡ್ಡಬಳ್ಳಾಪುರದ ತಿಪ್ಪಾಪುರ ಮೂಲದ ದಂಪತಿ ಹಾಗೂ ಮಗು ಬೈಕ್​​ನಲ್ಲಿ ಹೋಗುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದ ಲಾರಿಯು ಬೈಕ್​ಗೆ ಡಿಕ್ಕಿ ಹೊಡೆದಿದೆ. ಬಳಿಕ 3 ವರ್ಷದ ಮಗುವಿನ ತಲೆ ಮೇಲೆ ಲಾರಿಯ ಚಕ್ರ​​ ಹರಿದು ಹೋಗಿದೆ. ಪರಿಣಾಮದ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಇನ್ನು, ಬೈಕ್​ನಲ್ಲಿದ್ದ ತಂದೆ ಆಂಜಿನೇಯ ಹಾಗೂ ಪತ್ನಿ ಮಮತ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬೈಕ್​ಗೆ ಡಿಕ್ಕಿ ಹೊಡೆದ ಚಾಲಕ ಲಾರಿಯನ್ನು 1 ಕಿಮೀ ದೂರದಲ್ಲಿ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Latest Articles