Tuesday, March 18, 2025

ಬಸ್ಸಿಗೆ ನುಗ್ಗಿದ ಚಿರತೆ ಮರಿ.! ಚಾಲಕನ ಮೇಲೆ ಅಟ್ಯಾಕ್ – ತಾಯಿ ಚಿರತೆ ‌ಮಿಸ್ಸಿಂಗ್

ಬೆಂಗಳೂರು: ಚಿರತೆ ಮತ್ತು ಅದರ ಮರಿ ರಸ್ತೆಗೆ ನುಗ್ಗಿದ ಘಟನೆ‌ ವರದಿಯಾಗಿದೆ. ತುರಹಳ್ಳಿ ಫಾರೆಸ್ಟ್​ನಿಂದ ತಪ್ಪಿಸಿಕೊಂಡು ಬಂದಿದೆ‌ ಎನ್ನಲಾಗಿದೆ.

ಕೆಂಗೇರಿಯಿಂದ ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಿಎಂಟಿಸಿ ಬಸ್​​ನ ಅಡಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಂಡ ಕೂಡಲೇ ಬಿಎಂಟಿಸಿ ಚಾಲಕ ಬಸ್​ ನಿಲ್ಲಿಸಿದ್ದಾರೆ. ತಾಯಿ ಚಿರತೆ ತಪ್ಪಿಸಿಕೊಂಡಿದ್ದು, ಆ ಮರಿ‌ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು. ಬಳಿಕ ಆ ಮರಿಗೆ ನೀರು ಕುಡಿಸಲು ಮುಂದಾಗಿದ್ದ ಬಿಎಂಟಿಸಿ ಡ್ರೈವರ್​ ಮೇಲೆ ಚಿರತೆ ಅಟ್ಯಾಕ್ ಮಾಡಲು ಮುಂದಾಗಿದೆ.

ಕೂಡಲೇ ಎಚ್ಚೆತುಕೊಂಡ ಚಾಲಕ ಬಸ್​ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯದಂತೆ ಸೂಚನೆ ನೀಡಿದರೂ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮರಿ ರಕ್ಷಣೆ ಮಾಡಿದ್ದಾರೆ. ಇನ್ನು ತಪ್ಪಿಸಿಕೊಂಡ ತಾಯಿ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

Related Articles

Latest Articles