Saturday, January 25, 2025

ಚಂದ್ರನ ಮೇಲೆ ಬೆಳಗಾಯಿತು..! ಎದ್ದೇಳುತ್ತಾರಾ ಪ್ರಗ್ಯಾನ್ ಮತ್ತು ವಿಕ್ರಮ್..?? ವಿಶ್ವದ ಚಿತ್ತ ಮತ್ತೆ ಚಂದ್ರಯಾನದತ್ತ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಚಂದ್ರನತ್ತ ಕಳುಹಿಸಿರುವ ಚಂದ್ರಯಾನ-3 ರ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಮಾಡ್ಯೂಲ್ ಪ್ರಗ್ಯಾನ್ ನಿದ್ರೆ ಜಾರಿದ್ದು ಈಗ ಎಚ್ಚರಗೊಳ್ಳುವ ಸಮಯ ಹತ್ತಿರ ಬಂದಿದೆ. ಪ್ರಗ್ಯಾನ್ ಮತ್ತು ವಿಕ್ರಮ್ ಯಾವಾಗ ಬೇಕಾದರೂ ಎಚ್ಚರಗೊಳ್ಳಬಹುದು ಎಂಬ ಮುನ್ಸೂಚನೆಯನ್ನು ಇಸ್ರೋ ನೀಡಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ‌ ಶೀತಾಂಶಕ್ಕೆ ಜಗ್ಗದೆ ಇದ್ದಲ್ಲಿ ಮತ್ತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಇಸ್ರೋಗೆ ಭರವಸೆ ನೀಡಿದೆ.

ಚಂದ್ರನ ಮೇಲೆ ಈಗ ಅತ್ಯಂತ ಶೀತ ವಾತಾವರಣವಿದ್ದು, ಇವುಗಳನ್ನು ನಿದ್ರೆಯಿಂದ ಎಚ್ಚರಗೊಳಿಸಲು ಇಸ್ರೋ ಪ್ರಯತ್ನಿಸುತ್ತಿವೆ. ಗುರುವಾರ ಅಥವಾ ಶುಕ್ರವಾರ ಹೆಚ್ಚಿನ ಬಿಸಿಲು ಲಭ್ಯವಾಗಬಹುದು. ನಂತರ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್‌ಗಳಲ್ಲಿರುವ ಆನ್‌ಬೋರ್ಡ್ ಉಪಕರಣಗಳು ಸೋಲಾರ್‌ ಶಕ್ತಿಯಿಂದ ಪುನರುಜ್ಜೀವನಗೊಳ್ಳಬಹುದು ಎಂಬ ನಿರೀಕ್ಷೆಯಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರೋಬ್ಬರಿ 14 ದಿನದಿಂದ ನಿದ್ದೆ ಮಾಡುತ್ತಿರುವ ‘ವಿಕ್ರಮ್’ ಲ್ಯಾಂಡರ್ & ‘ಪ್ರಜ್ಞಾನ್‌’ ರೋವರ್‌ನ ನಿದ್ದೆಯಿಂದ ಎದ್ದೇಳಿಸಬೇಕಿದೆ. ಇಬ್ಬರ ನಿದ್ದೆಗೆ ಇಂದು ಕೊನೇ ದಿನವಾಗಿದ್ದು ಭಯ ಹೆಚ್ಚಾಗುತ್ತಿದೆ. ಚಂದ್ರನ ದಕ್ಷಿಣ ಧ್ರುವದ ‘ಶಿವಶಕ್ತಿ’ ಬಿಂದುವಲ್ಲಿ ನಿದ್ದೆ ಮಾಡ್ತಿರುವ ಚಂದ್ರಯಾನ-3ರ ಲ್ಯಾಂಡರ್‌ ಮತ್ತು ರೋವರ್‌ ಶುಕ್ರವಾರ ಅಂದರೆ ನಾಳೆ ಸೆಪ್ಟೆಂಬರ್ 22ಕ್ಕೆ ಚಂದ್ರನ ಸೂರ್ಯೋದಯ ಸಮಯಕ್ಕೆ ಮತ್ತೆ ಎಚ್ಚರವಾಗುತ್ತಾ? ಎಂಬ ಪ್ರಶ್ನೆ ಜಗತ್ತನ್ನೇ ಕಾಡುತ್ತಿದೆ. ಹಾಗಾದರೆ ಲ್ಯಾಂಡರ್ & ರೋವರ್ ನಿದ್ದೆಯಿಂದ ಎದ್ದೇಳಿಸಲು ವಿಜ್ಞಾನಿಗಳು ಏನು ಮಾಡ್ತಾರೆ?

ಅಷ್ಟಕ್ಕೂ ಚಂದ್ರನ ಅಂಗಳದಲ್ಲಿ ವಿಕ್ರಮ್‌ ಇಳಿದ ನಂತರ ರೋವರ್‌ ಚಂದ್ರನ ಒಂದು ಪೂರ್ತಿ ದಿನ ಅಂದರೆ ಭೂಮಿ ಲೆಕ್ಕದಲ್ಲಿ 14 ದಿನಗಳ ಕಾಲ ಕೆಲಸ ಮಾಡಿತ್ತು. ಆದರೆ ಅಲ್ಲಿ ಮತ್ತೆ ಸೂರ್ಯ ಮುಳುಗಿ, 14 ದಿನಗಳ ಹಿಂದೆ ಕಗ್ಗತ್ತಲು ಆವರಿಸಿತ್ತು. ಆಗ ಇಸ್ರೋ ವಿಜ್ಞಾನಿಗಳ ಬಳಗ ವೈಜ್ಞಾನಿಕ ಮಾಹಿತಿ ಸಂಗ್ರಹದ ಕಾರ್ಯ ನಿಲ್ಲಿಸಿದ್ದರು. ಈ ಮೂಲಕ ಇಸ್ರೋ ಸಂಸ್ಥೆ ವಿಜ್ಞಾನಿಗಳು ಲ್ಯಾಂಡರ್‌ ಮತ್ತು ರೋವರ್‌ನ ನಿದ್ರಾವಸ್ಥೆಗೆ ಕಳುಹಿಸಿದ್ದರು. ಆದರೆ ಈಗ ನಿದ್ದೆ ಮೂಡ್‌ನಿಂದ ಎಬ್ಬಿಸಬೇಕಿದೆ. ಈ ಕಾರಣಕ್ಕೆ ರೋವರ್ & ಲ್ಯಾಂಡರ್ ಆಕ್ಟಿವ್ ಮಾಡುವ ಪ್ರಯತ್ನ ಆರಂಭವಾಗಿದೆ.

ಭಾರತದ ವಿಕ್ರಮ್ ಲ್ಯಾಂಡರ್ ನಿದ್ದೆಗೆ ಜಾರುವ ಮೊದಲು ಮಹತ್ವದ ಬೆಳವಣಿಗೆ ನಡೆದಿತ್ತು. ಚಂದ್ರನಲ್ಲಿ ಕತ್ತಲು ಆವರಿಸಿದ ನಂತರ ಎಂಜಿನ್‌ ಉರಿಸುವ ಮೂಲಕ ‘ವಿಕ್ರಮ್’ ಲ್ಯಾಂಡರ್‌ ಅನ್ನ ಚಂದ್ರನ ನೆಲದಿಂದ ಲಾಂಚ್ ಮಾಡಿ ಒಂದಷ್ಟು ಪಕ್ಕಕ್ಕೆ ಸರಿಸಿ ಲ್ಯಾಂಡ್ ಮಾಡಿತ್ತು. ಹೀಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಎರಡೆರಡು ಬಾರಿ ಇಸ್ರೋ ಲ್ಯಾಂಡರ್ ಲ್ಯಾಂಡ್ ಆಗಿತ್ತು.

ಚಂದ್ರನ ನೆಲದಿಂದ ಸುಮಾರು 40 ಸೆಂಟಿಮೀಟರ್ ಮೇಲಕ್ಕೆ ಏರಿಸಿ, ಹಾಗೂ 30 ರಿಂದ 40 ಸೆಂ.ಮೀ ಪಕ್ಕ ತೇಲಿಸಲಾಗಿತ್ತು. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲೇ ಮತ್ತೊಂದು ಸ್ಥಳದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸಲಾಗಿದೆ. ಹೀಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಒಟ್ಟಾರೆ ಎರಡೆರಡು ಬಾರಿ ಲ್ಯಾಂಡ್ ಮಾಡಿಸಲಾಗಿತ್ತು. ಆದರೆ ಈಗ ನಿದ್ದೆ ಮಾಡ್ತಿರುವ ಲ್ಯಾಂಡರ್ ಎಬ್ಬಿಸುವ ಪ್ರಯತ್ನ ಶುರುವಾಗಿದೆ. ಲ್ಯಾಂಡರ್ ಮತ್ತು ರೋವರ್ ಸೌರಫಲಕ ಸ್ಪಂದಿಸುವ ನಿರೀಕ್ಷೆ ವಿಜ್ಞಾನಿಗಳಲ್ಲಿ ಮನೆಮಾಡಿದೆ.

ಭೂಮಿಯ ರೀತಿ ಚಂದ್ರನ ಮೇಲೆ ವಾತಾವರಣ ಇಲ್ಲ, ಹೀಗಾಗಿ ಅಲ್ಲಿ ಸೂರ್ಯನ ಬೆಳಕು ಬಿದ್ದಾಗ ಅತಿಯಾದ ಬಿಸಿ. ಸೂರ್ಯ ಮುಳುಗಿದಾಗ ಅತಿಯಾದ ಚಳಿ ಇರುತ್ತದೆ. ಚಳಿಯ ಪರಿಸ್ಥಿತಿ ಹೇಗಿರುತ್ತೆ ಎಂದರೆ ಮೈಕೊರೆಯುವುದು ಪಕ್ಕಾ. ಹೀಗೆ ಚಂದ್ರನಲ್ಲಿ ರಾತ್ರಿಯ ವೇಳೆ ಹೆಪ್ಪುಗಟ್ಟುವ ವಾತಾವರಣ ಇರುವ ಕಾರಣಕ್ಕೆ ಲ್ಯಾಂಡರ್‌ & ರೋವರ್‌ ಬೆಚ್ಚಗಿರಲು ಹೀಟರ್ ಅಗತ್ಯ. ಹೀಟರ್‌ಗೆ 14 ದಿನಗಳ ಕತ್ತಲಿನಲ್ಲಿ ಶಕ್ತಿ ‍ಪೂರೈಸುವ ಬ್ಯಾಟರಿ ಅಗತ್ಯವಿರುತ್ತದೆ. ಆಗ ಮಾತ್ರ ಅವು ಬದುಕುತ್ತವೆ. ಇದೇ ಕಾರಣಕ್ಕೆ ಬೇರೆ ಎಲ್ಲಾ ಕೆಲಸ ನಿಲ್ಲಿಸಿ, ಬ್ಯಾಟರಿ ಶಕ್ತಿಯ ಮೂಲಕ ರೋವರ್ & ಲ್ಯಾಂಡರ್‌ಗೆ ನಿದ್ದೆ ಮಾಡಿಸಿ ಹೀಟರ್ ಸೌಲಭ್ಯ ನೀಡಲಾಗಿತ್ತು.

Related Articles

Latest Articles