Tuesday, June 25, 2024

ಚಿತ್ರದುರ್ಗ: ಬಾಲಕಿಯನ್ನು ಪ್ರೀತಿಸುವುದಾಗಿ ನಿರಂತರ ದೈಹಿಕ ಸಂಪರ್ಕ.! ಗರ್ಭಿಣಿಯೆಂದು ತಿಳಿದು ಮಾತ್ರೆ ಸೇವನೆ – ಎಫ್‌ಐಆರ್ ದಾಖಲು

ಚಿತ್ರದುರ್ಗ: ಅಪ್ರಾಪ್ತೆಯನ್ನು ಪ್ರೀತಿಸುವುದಾಗಿ ಹೇಳಿ, ನಿರಂತರ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಯುವಕನ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ‌.

ಚಳ್ಳಕೆರೆ ತಾಲೂಕಿನ ಬರಮಸಾಗರದ ವೀರೇಶ್(19) ಅದೇ ಗ್ರಾಮದ 15 ವರ್ಷದ ಬಾಲಕಿಯನ್ನು ಪ್ರೀತಿಸಿದ್ದ. ಪದೇ ಪದೇ ದೈಹಿಕ ಸಂಪರ್ಕ ನಡೆಸಿ ಬಾಲಕಿಯನ್ನು ಗರ್ಭಿಣಿ ಮಾಡಿದ್ದು ಬೆಳಕಿಗೆ ಬಂದಿದೆ.

ಇದರಿಂದ ನೊಂದ ಬಾಲಕಿ ಮಾತ್ರೆಯನ್ನು ಸೇವಿಸಿದ್ದರಿಂದ ರಕ್ತ ಸ್ರಾವವಾಗಿದೆ‌. ವಿಷಯ ತಿಳಿಯುತ್ತಿದ್ದಂತೆ ತಂದೆ ತಾಯಿ ವಿಚಾರಿಸಿದಾಗ ವೀರೇಶ ನನ್ನನ್ನು ಪ್ರೀತಿಸಿ ದೈಹಿಕ ಸಂಪರ್ಕ ಪಡೆದಿದ್ದ ಎಂದು ಬಾಯಿಬಿಟ್ಟಿದ್ದಾಳೆ.

ವಿಷಯ ತಿಳಿದ ಮಹಿಳಾ ಮಕ್ಕಳ ಕಲ್ಯಾಣ ಹಾಗೂ ಶಿಶುಅಭಿವೃದ್ಧಿ ಇಲಾಖೆ ಬಾಲಕಿಯನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ‌. ಯುವಕನ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related Articles

Latest Articles