Saturday, May 24, 2025

ಬೆಕ್ಕಿನ ಮೂಗಿನ ಪ್ರಿಂಟ್; ಸ್ಮಾರ್ಟ್ ಫೋನ್ ಲಾಕ್ – ನೀವೂ ಟ್ರೈ ಮಾಡಿ

ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್, ಶಾರ್ಟ್ಸ್‌ಗಳು ಸಾಕಷ್ಟು ವೈರಲ್ ಆಗುತ್ತಲೇ ಇರುತ್ತದೆ‌. ನಿರ್ದಿಷ್ಟ ಕಾರಣವಿಲ್ಲದೆ ವಿಡಿಯೋದ ಸಣ್ಣ ಸಣ್ಣ ತುಣುಕುಗಳು ಮಿಲಿಯನ್ ವಿವ್ಸ್ ಪಡೆದುಕೊಳ್ಳುತ್ತದೆ. ಅದರಲ್ಲೂ ಪ್ರಾಣಿಗಳ ವಿಡಿಯೋ ವೀಕ್ಷಣೆಗೆಂದೇ ಅದರದ್ದೇ ವರ್ಗವಿದೆ.

ಮಾನವನಲ್ಲಿ ನಾವು ಬಯೋಮೆಟ್ರಿಕ್ ಕೇಳಿದ್ದೇವೆ‌.‌ ಒಬ್ಬರಂತೆ ಇನ್ನೊಬ್ಬರ ಕಣ್ಣು ಇರಲ್ಲ.‌ ಅದೇ ರೀತಿ ಪ್ರತಿಯೊಬ್ಬರ ಫಿಂಗರ್ ಪ್ರಿಂಟ್ ಭಿನ್ನವಾಗಿರುತ್ತದೆ. ಕಾಲುಗಳ ಗೆರೆಗಳು ಸಹ ಬೇರೆ ಬೇರೆಯಾಗಿರುತ್ತದೆ. ಇದರಿಂದಲೆ ಇಂದು ಫೇಸ್ ಲಾಕ್, ಪಿಂಗರ್ ಪ್ರಿಂಟ್ ಲಾಕ್‌‌ಗೆ ಡಿಜಿಟಲ್ ಯುಗ ತಲೆಬಾಗಿದೆ.

ಮನುಷ್ಯನಲ್ಲಿ ಫಿಂಗರ್ ಪ್ರಿಂಟ್ ಬೇರೆ ಬೇರೆ ಆಗಿದಿಯೋ ಅದೇ ರೀತಿ ಬೆಕ್ಕುಗಳ ಮೂಗಿನ ಮೇಲೂ ಗೆರೆಗಳಿವೆ. ಅದು ಒಂದು ಬೆಕ್ಕಿಗಿಂತ ಇನ್ನೊಂದು ಬೆಕ್ಕಿನಲ್ಲಿ ವ್ಯತ್ಯಾಸವಾಗಿರುತ್ತದೆ ಎಂಬುವುದು ಅಧ್ಯಯನವು ಸಾಬೀತುಪಡಿಸಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಅದೇನೆಂದರೆ ಬೆಕ್ಕಿನ ಮೂಗಿನ ಪ್ರಿಂಟ್ ಹಾಕಿ ಸ್ಮಾರ್ಟ್ ಫೋನ್ ಲಾಕ್ ಮಾಡುವುದು. ಹೌದು. ಮನೆ ಬೆಕ್ಕಿನ ಮೂಗನ್ನು ಸ್ಮಾರ್ಟ್ ಫೋನಿನ ಮೂಗಿಗೆ ಇಟ್ಟು ಲಾಕಿಂಗ್ ಅಪ್ಡೇಟ್ ಮಾಡಲಾಗುತ್ತಿದೆ. ಇದು ಕೆಲಸ ಕೂಡ ಮಾಡುತ್ತದೆ. ಬೆಕ್ಕು ಪ್ರಿಯರಿಗೆ ಇದು ಖುಷಿ ಕೊಟ್ಟಿದೆ.

Related Articles

Latest Articles