Sunday, November 3, 2024

BMTC ಚಾಲಕ, ನಿರ್ವಾಹಕನಿಗೆ ಸ್ಕ್ರೂ ಡ್ರೈವರ್ ತೋರಿಸಿ ಬೆದರಿಕೆ..!

ಬೆಂಗಳೂರು ಮಹಾನಗರ ಸಾರಿಗೆ (BMTC) ಬಸ್ ಸಿಬ್ಬಂದಿಗಳ ಮೇಲಿನ ಹಲ್ಲೆ ಪ್ರಕರಣ ಜಾಸ್ತಿಯಾಗುತ್ತಲೇ ಇದೆ. BMTC ಬಸ್​ ನಿರ್ವಾಹಕನಿಗೆ ಚಾಕು ಇರಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹಲ್ಲೆ ಮತ್ತು ಬೆದರಿಕೆ ಘಟನೆ ನಡೆದಿದೆ. ಪ್ರಯಾಣಿಕ ಬಿಎಂಟಿಸಿ ಬಸ್​ ನಿರ್ವಾಹಕ ಮತ್ತು ಚಾಲಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ್ದಾನೆ.

ಅ. 3ರ ಸಂಜೆ 4:15ರ ಸುಮಾರಿಗೆ ಬಿಎಂಟಿಸಿ ವೋಲ್ವೋ ಬಸ್​ ಅತ್ತಿಬೆಲೆಯಿಂದ ಮೆಜಸ್ಟಿಕ್​ಗೆ ಹೋಗುತ್ತಿತ್ತು. ಬೆದರಿಕೆ ಹಾಕಿದ ಪ್ರಯಾಣಿಕ ಕೊನಪ್ಪನ ಅಗ್ರಹಾರದಲ್ಲಿ ಬಸ್ ಹತ್ತಿದ್ದಾನೆ. ​ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ನೀಡುವ ಸಂಬಂಧ ಬಸ್​ ಅನ್ನು ಅದೇ ನಿಲ್ದಾಣದಲ್ಲಿ ಕೆಲ ಹೊತ್ತು ನಿಲ್ಲಿಸಿದ್ದಾನೆ.

ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ಹೊಸ ರೋಡ್ ಬಸ್ ನಿಲ್ದಾಣದಲ್ಲಿ ಬಸ್​ನಿಂದ ಇಳಿದು, ಬ್ಯಾಗ್​ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದು, ಚಾಲಕ ಮತ್ತು ನಿರ್ವಾಹಕನಿಗೆ ತೋರಿಸಿ, ಚುಚ್ಚಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಇನ್ನು ಕೆಲದಿನಗಳ ಹಿಂದಷ್ಟೇ ಜಾರ್ಖಾಂಡ್ ಮೂಲದ ವ್ಯಕ್ತಿಯನ್ನು ಬಾಗಿಲಿನಿಂದ ಮೇಲೆ ಬರಲು ಸೂಚಿಸಿದ್ದಕ್ಕೆ ಹಲ್ಲೆ ಮಾಡಿದ್ದ ಘಟನೆಯೂ ವರದಿಯಾಗಿತ್ತು.

Related Articles

Latest Articles