ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದ್ದು ಆಡಳಿತರೂಢ ಬಿಜೆಪಿ ಕೂಟ ಟಿಕೆಟ್ ಘೋಷಣೆ ಮಾಡಿದೆ. ಬಹು ಕುತೂಹಲಕಾರಿ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡ ಸಂಸದ ಸ್ಥಾನಕ್ಕೆ ಬಿಜೆಪಿ ಪಾಳಯದಿಂದ ಟಿಕೆಟ್ ಅನೌನ್ಸ್ ಆಗಿದೆ.
ದಕ್ಷಿಣ ಕನ್ನಡದಲ್ಲಿ ಈ ಬಾರಿ ಹ್ಯಾಟ್ರಿಕ್ ಜಯ ಶಾಲಿಯಾದ ನಳೀನ್ ಕುಮಾರ್ ಕಟೀಲ್ ಗೆ ಮಣೆ ಹಾಕಿಲ್ಲ. ಬದಲಾಗಿ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಕ್ಯಾ ಬ್ರಿಜೇಶ್ ಚೌಟರಿಗೆ ಈ ಬಾರಿ ಕಮಲ ಪಾಳಯ ಸ್ಥಾನ ನೀಡಿದೆ.
ಉಡುಪಿಗೆ ಈ ಬಾರಿ ಶೋಭಾ ಕರಂದ್ಲಾಜೆ ಬದಲಾಗಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಜಾಪುರ- ರಮೇಶ್ ಜಿಗಜಿಣಗಿ
ಚಿಕ್ಕೋಡಿ- ಅಣ್ಣಾ ಸಾಹೇಬ್ ಜೊಲ್ಲೆ
ಬಾಗಲಕೋಟೆ- ಪಿ.ಸಿ. ಗದ್ದಿಗೌಡರ
ಕಲಬುರಗಿ- ಉಮೇಶ್ ಜಾಧವ್
ಬೀದರ್- ಭಗವಂತ ಖೂಬಾ
ಕೊಪ್ಪಳ- ಡಾ. ಬಸವರಾಜ ಕ್ಯಾವತೋರ್
ಬಳ್ಳಾರಿ- ಶ್ರೀರಾಮುಲು
ಹಾವೇರಿ- ಬಸವರಾಜ ಬೊಮ್ಮಾಯಿ
ಧಾರವಾಡ- ಪ್ರಹ್ಲಾದ್ ಜೋಶಿ
ದಾವಣಗೆರೆ- ಗಾಯತ್ರಿ ಸಿದ್ದೇಶ್ವರ
ಶಿವಮೊಗ್ಗ- ಬಿ.ವೈ. ರಾಘವೇಂದ್ರ
ಉಡುಪಿ-ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ
ದಕ್ಷಿಣ ಕನ್ನಡ – ಕ್ಯಾ.ಬ್ರಿಜೇಶ್ ಚೌಟಾ
ತುಮಕೂರು – ವಿ. ಸೋಮಣ್ಣ
ಮೈಸೂರು- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಚಾಮರಾಜನಗರ- ಎಸ್. ಬಸವರಾಜು
ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್. ಮಂಜುನಾಥ್
ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ
ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್
ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ