Tuesday, March 18, 2025

ಜೈಲಿನಲ್ಲಿ ಕೊಲೆಗಾರನ ಭರ್ಜರಿ ಬರ್ತ್‌ಡೇ ಸೆಲೆಬ್ರೇಶನ್

ಕೆಲವು ಖೈದಿಗಳು ಜೈಲನ್ನೇ ಅರಮನೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಸಾಬೀತುಪಡಿಸುವ ಇನ್ನೊಂದು ಸಾಕ್ಷ್ಯ ತಡವಾಗಿ ದೊರೆತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಾರನೊಬ್ಬ ಬರ್ತ್‌ಡೇ ಸೆಲೆಬ್ರೇಶನ್ ಮಾಡಿಕೊಂಡಿದ್ದಾನೆ.

ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿರುವ ಉಮೇಶ್‌, ಕಳೆದ ತಿಂಗಳು ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಿಕೊಂಡಿದ್ದು ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಮರ್ಡರ್ ಕೇಸ್‌ನಲ್ಲಿ ಉಮೇಶ್‌ ಜೈಲು ಸೇರಿದ್ದ. ಆನಂದ್ ಎಂಬವನನ್ನು ಕೊಲೆ ಮಾಡಿ ಹಂತಕ ಉಮೇಶ್ ಜೈಲಿಗೆ ಹೋಗಿದ್ದ. ಇಂಥವನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಬೆಂಬಲಿಗರೊಂದಿಗೆ ಕೇಕ್ ಕಟ್ ಮಾಡಿ ಸೆಲಬ್ರೆಷನ್ ಮಾಡಿಕೊಂಡಿದ್ದಾನೆ. ಒಳಗಡೆ ಅಷ್ಟೇ ಅಲ್ಲದೇ ಸೆಂಟ್ರಲ್ ಜೈಲ್ ಮುಂದೆಯೂ ಆತನ ಬೆಂಬಲಿಗರು ಸೆಲಬ್ರೇಟ್ ಮಾಡಿದ್ದಾರೆ.

ಜೈಲು ಅಧಿಕಾರಿಗಳ ಸಹಾಯ ಇಲ್ಲದೇ ಖೈದಿಯ ಭರ್ಜರಿ ಬರ್ತ್‌ಡೇ ಆಚರಣೆ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಆದರೆ ಇಷ್ಟೆಲ್ಲ ಬೆಳವಣಿಗೆ ಆದರೂ ಕೂಡ ಜೈಲಿನ ಮೇಲಧಿಕಾರಿಗಳು ತಮಗಿದರ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ.

ಈ ಹಿಂದೆ ಹಲವು ಸಲ ಪರಪ್ಪನ ಅಗ್ರಹಾರ ಜೈಲಿಗೆ ಮೇಲಧಿಕಾರಿಗಳು ದಿಡೀರ್‌ ದಾಳಿ ನಡೆಸಿ ತಪಾಸಣೆ ನಡೆಸಿದಾಗ ಕೈದಿಗಳ ಬಳಿ ಮೊಬೈಲ್‌ ಫೋನ್‌, ಗಾಂಜಾ ಮತ್ತಿತರ ವಸ್ತುಗಳು ದೊರೆತಿದ್ದವು. ಅದಾದ ಬಳಿಕ ಅಲ್ಲಿನ ನಿಯಮಗಳನ್ನು ಬಿಗಿ ಮಾಡಲಾಗಿದೆ. ಆದರೂ ಇಂಥ ಪ್ರಕರಣಗಳು ನಡೆಯುತ್ತಿವೆ.

Related Articles

Latest Articles