Monday, September 16, 2024

ವೈಟ್‌ಲಿಫ್ಟಿಂಗ್ ವಿಶ್ವಕಪ್; ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಿಂದ್ಯಾರಾಣಿ ದೇವಿ

ಥಾಯ್ಲೆಂಡ್: ಪ್ರತಿಯೊಬ್ಬರೂ ಐಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ನಿರತವಾಗಿರಬೇಕಾದರೆ, ಇಲ್ಲೊಂದು ‌ಕಡೆ ಭಾರತೀಯ ಹೆಣ್ಣುಮಗಳೊಬ್ಬಳು ಕ್ರೀಡಾಲೋಕದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಅವರೇ ಕಾಮನ್‌ವೆಲ್ತ್ ಗೇಮ್ಸ್‌ನ ಪದಕ ವಿಜೇತೆ ಬಿಂದ್ಯಾರಾಣಿ ದೇವಿ.

ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆ ಬಿಂದ್ಯಾರಾಣಿ ದೇವಿ ಅವರು ಐಡಬ್ಲ್ಯುಎಫ್ ವಿಶ್ವ ಕಪ್ ವೈಟ್‌ಲಿಫ್ಟಿಂಗ್‌ನ ಮಹಿಳೆಯರ 55 ಕೆ.ಜಿ. ವಿಭಾಗದಲ್ಲಿ ಮಂಗಳವಾರ ಕಂಚಿನ ಪದಕ ಗೆದ್ದುಕೊಂಡರು. ಆ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವಕಪ್‌ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯಳಾಗಿ ಹೊರಹೊಮ್ಮಿದ್ದಾರೆ.‌

25 ವರ್ಷದ ಬಿಂದ್ಯಾರಾಣಿ ಒಟ್ಟು 196 ಕೆ.ಜಿ (83+113 ಕೆ.ಜಿ) ಭಾರ ಎತ್ತಿದರು. ಈ ತೂಕ ವಿಭಾಗದ ಒಲಿಂಪಿಕ್ಸ್‌ನಲ್ಲಿ ಇರುವುದಿಲ್ಲ. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 203 ಕೆ.ಜಿ ಎತ್ತಿದ್ದರು.

ಉತ್ತರ ಕೊರಿಯಾದ ಕಾಂಗ್ ಗ್ಯಾಂಗ್ 234 ಕೆ.ಜಿ (103+131) ಭಾರ ಎತ್ತಿ ಚಿನ್ನ ಗೆದ್ದರು. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ರುಮೇನಿಯಾದ ಕ್ಯಾಂಬಿ ಮಿಹೇಲ ವೆಲಂಟಿನಾ ಒಟ್ಟು 201 ಕೆ.ಜಿ. ಭಾರ ಎತ್ತಿ ಬೆಳ್ಳಿ ಪಡೆದರು.

Related Articles

Latest Articles