Tuesday, June 25, 2024

ಸಂಗೀತಾಗೆ ಫಿನಾಲೆ ಟಿಕೆಟ್ ಜೊತೆ ಮತ್ತೊಂದು ದೊಡ್ಡ ಅಡ್ವಾಂಟೇಜ್ ಕೊಟ್ಟ ಬಿಗ್ ಬಾಸ್..!

ಬಿಗ್ ಬಾಸ್ ಮನೆ‌ಯಲ್ಲಿ ಕಾವು ಹೆಚ್ಚಾಗಿದೆ. ಫೈನಲ್ ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳಲ್ಲಿ ಉತ್ಸಾಹ ಹೆಚ್ಚಿದೆ. ಈ ವಾರ ಎಲ್ಲವೂ ವೈಯಕ್ತಿಕ ಟಾಸ್ಕ್​ಗಳು ಆಗಿದ್ದವು. ಸಂಗೀತಾಗೆ ಹೆಚ್ಚು ಅಂಕ ಸಿಕ್ಕಿದೆ. ಮನೆಯವರ ವೋಟ್ ಪ್ರಕಾರ ಸಂಗೀತಾ ಶೃಂಗೇರಿ ಅವರು ಫಿನಾಲೆ ಟಿಕೆಟ್ ಪಡೆದರು. ಇದರ ಜೊತೆ ಮತ್ತೊಂದು ಅಡ್ವಾಂಟೇಜ್ ಸಿಕ್ಕಿದೆ.

ಈ ವಾರ ಸಂಗೀತಾ ಶೃಂಗೇರಿ ಅವರಿಗೆ ಸಾಕಷ್ಟು ಪ್ರಮುಖವಾಗಿತ್ತು. ಅವರು ಎಲ್ಲಾ ಟಾಸ್ಕ್​ನಲ್ಲಿ ಉತ್ತಮವಾಗಿ ಆಡಿದರು. ಇದರ ಜೊತೆ ಮನೆಯವರು ನೀಡಿದ ಬೆಂಬಲದಿಂದ ಅವರು ಫಿನಾಲೆ ಟಿಕೆಟ್ ಪಡೆದರು. ಇದರ ಜೊತೆಗೆ ಬಿಗ್ ಬಾಸ್ ಮತ್ತೊಂದು ಅಡ್ವಾಂಟೇಜ್ ನೀಡಿದ್ದಾರೆ. ಈ ಅಡ್ವಾಂಟೇಜ್ ಸ್ವೀಕರಿಸಿದ ಬಳಿಕ ಸಂಗೀತಾ ಅವರು ಸಖತ್ ಖುಷಿಪಟ್ಟಿದ್ದಾರೆ. ಮನೆಯವರು ಕೂಡ ಸಂಗೀತಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಈ ವಾರ ಎಲ್ಲವೂ ವೈಯಕ್ತಿಕ ಟಾಸ್ಕ್​ಗಳು ಆಗಿದ್ದವು. ಸಂಗೀತಾ ಶೃಂಗೇರಿ, ನಮ್ರತಾ ಹಾಗೂ ಪ್ರತಾಪ್ ಅತಿ ಹೆಚ್ಚು ಅಂಕ ಗಳಿಸಿ ಫಿನಾಲೆ ಟಿಕೆಟ್ ಪಡೆಯುವ ರೇಸ್ ತಲುಪಿದರು. ಈ ಪೈಕಿ ಒಬ್ಬರಿಗೆ ಟಿಕೆಟ್​ ಸಿಗಲಿದೆ ಎಂದು ಬಿಗ್ ಬಾಸ್ ತಿಳಿಸಿದರು. ಮನೆಯವರ ವೋಟ್ ಪ್ರಕಾರ ಸಂಗೀತಾ ಶೃಂಗೇರಿ ಅವರು ಫಿನಾಲೆ ಟಿಕೆಟ್ ಪಡೆದರು.

ಈ ವಾರ ನಡೆದಿದ್ದು ಕ್ಯಾಪ್ಟನ್ಸಿ ಟಾಸ್ಕ್​ ಕೂಡ ಹೌದಾಗಿತ್ತು. ಈ ಬಗ್ಗೆ ಸ್ಪರ್ಧಿಗಳು ಗಮನ ಹರಿಸಿರಲಿಲ್ಲ. ಫಿನಾಲೆ ಟಿಕೆಟ್ ಜೊತೆ ಕ್ಯಾಪ್ಟನ್ ಪಟ್ಟವೂ ಸಂಗೀತಾಗೆ ಸಿಕ್ಕಿದೆ. ಈ ಮೂಲಕ ಸಂಗೀತಾ ಬ್ಯಾಕ್ ಟು ಬ್ಯಾಕ್ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಇದನ್ನು ಕೇಳಿ ಅವರಿಗೆ ಖುಷಿ ಆಗಿದೆ. ಮತ್ತೊಮ್ಮೆ ಕ್ಯಾಪ್ಟನ್ ಆದ ಖುಷಿಯಲ್ಲಿ ಅವರು ಸಂತೋಷ ಹೊರ ಹಾಕಿದ್ದಾರೆ.

Related Articles

Latest Articles