Monday, May 19, 2025

ಮಿತಿ‌ ಮೀರಿದ ರಿಯಾಲಿಟಿ ಶೋ..! ಲೈವ್‌ನಲ್ಲೇ ಅಸಭ್ಯ ವರ್ತನೆ – ವಿಡಿಯೋ ವೈರಲ್

ಹಿಂದಿ ಬಿಗ್​ಬಾಸ್ ಒಟಿಟಿ ಸೀಸನ್​ 3 ಈ ಸಲ ಭಾರೀ ಸದ್ದು ಮಾಡುತ್ತಿದೆ. ಟಿವಿಯಲ್ಲಿ ಪ್ರಸಾರ ಆಗುವುದನ್ನೂ ಮೈಮೆರೆತು ಎಲ್ಲದರ ಗಡಿ ಮೀರಿದ ಘಟನೆ ನಡೆದಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ‌

ಈ ಬಾರಿಯ ಬಿಗ್​ಬಾಸ್​ ರಿಯಾಲಿಟಿ ಶೋಗೆ ಯೂಟ್ಯೂಬರ್ ಅರ್ಮಾನ್ ಮಲಿಕ್ ತಮ್ಮ ಇಬ್ಬರು ಹೆಂಡತಿಯರಾದ ಕೃತಿಕಾ ಮತ್ತು ಪಾಯಲ್ ಜೊತೆ ಎಂಟ್ರಿ ಕೊಟ್ಟಿದ್ದರು.

ಬಿಗ್​ಬಾಸ್​ಗೂ ಬರುವ ಮುನ್ನ ಸಖತ್​ ಹೈಪ್​ ಕ್ರಿಯೇಟ್​ ಮಾಡಿದ್ದ ಅರ್ಮಾನ್ ಮಲಿಕ್ ದಂಪತಿ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಕಳೆದ ವಾರವಷ್ಟೇ ಬಿಗ್​ಬಾಸ್​​​ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಹೈಡ್ರಾಮ ನಡೆದಿತ್ತು, ಸಹ ಕಂಟೆಸ್ಟಂಟ್ ಆಗಿರೋ ವಿಶಾಲ್​​​ಗೆ ಅರ್ಮಾನ್ ಮಲಿಕ್ ಕಪಾಳಮೋಕ್ಷ ಮಾಡಿ ಸಖತ್​ ಹಲ್​ಚಲ್​ ಸೃಷ್ಟಿಸಿದ್ದರು.

ಜನಪ್ರಿಯ ಯೂಟ್ಯೂಬರ್ ಅರ್ಮಾನ್ ಮಲಿಕ್​ ತನ್ನಿಬ್ಬರು ಪತ್ನಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಜತೆ ಬಿಗ್​ಬಾಸ್ ಒಟಿಟಿ ಸೀಸನ್ 3ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಬಂದ ಮೊದಲ ವಾರಕ್ಕೆ ಪತ್ನಿ ಪಾಯಲ್​ ಮಲಿಕ್​ ಶೋನಿಂದ ಎಲಿಮಿನೇಟ್ ಆಗಿದ್ದರು. ಸದ್ಯ ಅರ್ಮಾನ್ ಮಲಿಕ್ ಜೊತೆಗೆ ಕೃತಿಕಾ ಮಲಿಕ್​ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ.

ಆದರೆ ಇದರ ಮಧ್ಯೆ ಬಿಗ್​ಬಾಸ್​ ಕ್ಯಾಮೆರಾ ಕಣ್ಣಿಗೆ ವಿಡಿಯೋವೊಂದು ಸೆರೆ ಸಿಕ್ಕಿದೆ. ಅರ್ಮಾನ್ ಮಲಿಕ್ ಹಾಗೂ ಕೃತಿಕಾ ಮಲಿಕ್​ ಮಿಲನಕ್ರಿಯೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ವೀಕ್ಷಕರು ದಂಪತಿ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ವಿಡಿಯೋ ಕಳೆದ ರಾತ್ರಿಯ ಸಂಚಿಕೆಯಲ್ಲಿ ಲೈಟ್ಸ್​ ಆಫ್ ಮಾಡಿದ ಬಳಿಕ ಕಂಡು ಬಂದಿದೆ. ಇದೀಗ ಬಿಗ್​ಬಾಸ್​ ಶೋ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದೆ.

Related Articles

Latest Articles