ಬೆಂಗಳೂರು: ಪುಂಡರ ಗ್ಯಾಂಗ್ವೊಂದು ಶಾಲಾ ಬಾಲಕಿಯರ ಜೊತೆ ಅಸಭ್ಯ ವರ್ತಿಸಿದ ಘಟನೆ ನಗರದ ಹೆಚ್ಎಎಲ್ (HAL) ಖಾಸಗಿ ಶಾಲೆ ಬಳಿ ನಡೆದಿದೆ.
ಇನೋವಾ ಕಾರಿನಲ್ಲಿ ಬಂದಿದ್ದ ಯುವಕ ಗ್ಯಾಂಗ್ನಿಂದ ಶಾಲಾ ಬಾಲಕಿಯರಿಗೆ ಕಿರುಕುಳ ನೀಡಲಾಗಿದೆ. ಫುಟ್ಪಾತ್ ಮೇಲೆ ಓಡಾಡುತ್ತಿದ್ದ ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವುದರೊಂದಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ವಿಕೃತಿ ಮೆರೆದಿದ್ದಾರೆ. ಇದನ್ನು ಪ್ರಶ್ನಿಸಿದ ಸ್ಥಳೀಯರ ಮೇಲೆ ಮದ್ಯಪಾನ ಮಾಡಿದ ಯುವಕರು ಹಲ್ಲೆಗೆ ಮುಂದಾಗಿದ್ದರು.
ಘಟನೆ ಬಗ್ಗೆ ಓರ್ವ ವಿದ್ಯಾರ್ಥಿನಿ ಪ್ರತಿಕ್ರಿಯಿಸಿದ್ದು, ನಾವು ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಫುಟ್ಪಾತ್ ಮೇಲೆ ಇನೋವಾ ಕಾರು ಹತ್ತಿಸಿ ಒಬ್ಬ ಯುವಕ ಬಿದ್ದ. ಕೈಯಲ್ಲಿ ಬಾಟಲ್ ಹಿಡಿದಿದ್ದು ಆ್ಯಸಿಡ್ ಹಾಕುತ್ತೇನೆ ಎಂದು ಹೆದರಿಸಿದ. ಭಯವಾಗಿ ನಾವು ದೂರು ಹೋದೆವು.
ಬಳಿಕ ಅಶ್ಲೀಲ ಶಬ್ದಗಳಿಂದ ನಿಂದಿಸಿದ. ಏನು ಅಂತ ಕೇಳುವುದಕ್ಕೆ ಹೋದಾಗ ನಮ್ಮ ಮೇಲೆ ಕಾರು ಹತ್ತಿಸಲು ಮುಂದಾದರು. ಆಗ ಒಬ್ಬರು ಅಂಕಲ್ ಬಂದು ಪ್ರಶ್ನಿಸಿದಕ್ಕೆ ಅವರ ಮೇಲೆ ಕೂಡ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.
ಗಾಂಜಾ ನಶೆ, ಕುಡಿದ ಅಮಲಿನಲ್ಲಿ ದೌರ್ಜನ್ಯವೆಸಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
In a disturbing incident near HAL, four young girls were attacked by a group of thugs on Wednesday evening. The girls were walking along the road when an Innova car, bearing the registration number KA01MK4606, approached them. Five men, reportedly intoxicated, began behaving rudely, hurling insults, and making inappropriate remarks.