Wednesday, June 19, 2024

ಟೈರ್​​ ಸಿಡಿದು ಕಾರ್​ ಡಿವೈಡರ್​​​​​ಗೆ ಡಿಕ್ಕಿ – ಮೂವರು ಮೃತ್ಯು

ಬೆಂಗಳೂರು ಹೊರವಲಯದ ಅಂಚೆಪಾಳ್ಯ ಬಳಿ ಕಾರ್​​​ ಟೈರ್​​ ಸಿಡಿದು ಕಾರ್​ ಡಿವೈಡರ್​​​​​ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ತುಮಕೂರು-ಬೆಂಗಳೂರು ರಸ್ತೆಯಲ್ಲಿ ಕಳೆದ ರಾತ್ರಿ ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯ ಬಳಿ ಕಾರು ಅತಿ ವೇಗವಾಗಿ ಬರುತ್ತಿತ್ತು.

ಮೃತರಲ್ಲಿ ಇಬ್ಬರ ಗುರುತು ಸಿಕ್ಕಿದೆ. ಅಗಸ್ಟಿನ್​​​, ಧಾರಾರೆಡ್ಡಿ ಎಂದು ಗುರುತಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಕಾರಿನಲ್ಲಿದ್ದ ಐವರ ಪೈಕಿ ಮೂವರು ದುರ್ಮರಣ ಹೊಂದಿದ್ದು, ಗಂಭೀರ ಗಾಯಗೊಂಡ ಇಬ್ಬರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಇಂಜಿನಿಯರ್ಸ್ ಆಗಿದ್ದು, ಮಾನ್ಯತ ಟೆಕ್ ಪಾರ್ಕ್ ಬಳಿಯ Cognizant ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Articles

Latest Articles