ಬೆಳ್ತಂಗಡಿ: ಮಹಿಳೆಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಳದಂಗಡಿ ಸನಿಹದ ಕುಬಲಾಜೆ ಮನೆ ನಿವಾಸಿ ಕಾವ್ಯಾ(32) ನೇಣಿಗೆ ಶರಣಾದ ಗೃಹಿಣಿ.
ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 18 ರ ಮಧ್ಯಾಹ್ನ ನಡೆದಿದೆ. ತನ್ನ ಮನೆಯ ಕೋಣೆಯಲ್ಲಿನ ತೊಟ್ಟಿಲು ಕಟ್ಟುವ ಹುಕ್ಸ್ ಗೆ ಚೂಡಿದಾರದ ವೇಲನ್ನು ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.