Monday, December 9, 2024

ದ.ಕ: ಬೆಳ್ಳಂಬೆಳಗ್ಗೆ ದರೋಡೆ: ತಾಯಿಮಗಳಿಗೆ ಹಲ್ಲೆ ನಡೆಸಿ ನಗ ನಗದು ಲೂಟಿಗೈದ ಮುಸುಕುದಾರಿ ದರೋಡೆಕೋರರು

ದಕ್ಷಿಣ ಕನ್ನಡ: ನಾಲ್ವರು ಮುಸುಕುದಾರಿ ದರೋಡೆ ಕೋರರ ತಂಡ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗ ನಗದನ್ನು ದರೋಡೆ ಮಾಡಿದ ಘಟನೆ ಜ.11ರ ಮುಂಜಾನೆ ಬಂಟ್ವಾಳ ವಗ್ಗದಲ್ಲಿ ನಡೆದಿದೆ.

ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿ ರುವ ಪ್ಲೋರಿನ್ ಪಿಂಟೋ ಅವರ ಹೊಸ ಮನೆಯಲ್ಲಿ ಈ ದರೋಡೆ ನಡೆದಿದೆ.

ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದು ಗಂಡಸರಿಲ್ಲದ ಮನೆಯನ್ನು ಹೊಂಚುಹಾಕಿ ಈ ದರೋಡೆ ನಡೆಸಲಾಗಿದೆ. ಗೊದ್ರೇಜ್ ನಲ್ಲಿರಿಸಲಾಗಿದ್ದ ಸುಮಾರು 2.90 ಲಕ್ಷ ರೂ. ಮೌಲ್ಯದ ವಿವಿಧ ಬಂಗಾರಗಳು, 30 ಸಾವಿರ ನಗದು ಹಾಗೂ ಒಂದು ಮೊಬೈಲ್ ಪೋನ್ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗನಗದು ದೋಚಿದ್ದಾರೆ.

ಬೆಳಿಗ್ಗೆ ಸುಮಾರು 6.30 ರ ಸಮಯದಲ್ಲಿ ಬೆಲ್ ಹಾಕಿದಾಗ ಬಾಗಿಲು ತೆಗದು ನೋಡಿದಾಗ ನಾಲ್ವರು ಮುಸುಕುದಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ನಗನಗದು ಕೊಡುವಂತೆ ಬೆದರಿಸಿದ್ದಾರೆ.

ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದಾಗ ಗೊದ್ರೇಜ್ ನ ಬೀಗದ ಕೀ ನೀಡಿದ್ದಾರೆ. ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ಇವರ ಅಣ್ಣ ವರದಿಗಾರ ಆಸ್ಟಿನ್ ಪಿಂಟೋ ಮಾಧ್ಯಮ ದವರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಅಂಗಡಿಯಿಂದ ಜ್ಯೂಸ್ ಮೆಷಿನ್ ಒಂದನ್ನು ಕಳವು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಬೇಟಿ ನೀಡಿದ್ದಾರೆ. ಹಾಗೂ ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Latest Articles