ಬೆಂಗಳೂರು: ಬ್ಯಾಂಕ್ ಉದ್ಯೋಗಿಯೊಬ್ಬ ಆನ್ಲೈನ್ ರಮ್ಮಿ ಆಟದ ಚಟಕ್ಕೆ ಬಿದ್ದು 20 ಲಕ್ಷ ಕಳೆದುಕೊಂಡ ಘಟನೆ ವರದಿಯಾಗಿದೆ. ಇಪ್ಪತ್ತು ಲಕ್ಷ ಕಳೆದುಕೊಂಡು ಸಾಲ ತೀರಿಸಲಾಗದೇ ಮನೆಬಿಟ್ಟು ಹೋದ ಘಟನೆ ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ನಡೆದಿದೆ. ಭರತ್, ನಾಪತ್ತೆಯಾದ ಬ್ಯಾಂಕ್ ಉದ್ಯೋಗಿ.
ಈತ ಆನ್ಲೈನ್ ರಮ್ಮಿ ಆಡಲು ಬ್ಯಾಂಕ್ನಿಂದ 20 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು. ಇಎಮ್ಐ(EMI) ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ವಿಡಿಯೋ ಮಾಡಿ ನಾಪತ್ತೆಯಾಗಿದ್ದಾರೆ.
ಸೆಲ್ಪೀ ವಿಡಿಯೋ ಮಾಡಿರುವ ಭರತ್ ‘ನಾನು ಜೀವನದಲ್ಲಿ ಸೋತಿದ್ದೇನೆ. ನನ್ನನ್ನು ಹುಡುಕಬೇಡಿ. ನಾನು ಮನೆಬಿಟ್ಟು ಹೋಗುತ್ತಿದ್ದೇನೆಂದು ವಿಡಿಯೋ ಮಾಡಿ, ಮೊಬೈಲ್ ಮನೆಯಲ್ಲೇ ಬಿಟ್ಟು ಭರತ್ ತೆರಳಿದ್ದಾನೆ. ಸದ್ಯ ಭರತ್ ಪತ್ನಿ ಚೈತ್ರಾ ಎಂಬುವವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದು, ಹೇಗಾದರೂ ನನ್ನ ಗಂಡನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.